ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎತ್ತಿನಹೊಳೆ ವಿರೋಧಿಸಿ ಬೆಲ್ಲ ಬಾಜೆಲ್

ಹಂಪನಕಟ್ಟೆಯಲ್ಲಿ ಸಹ್ಯಾದ್ರಿ ಸಂರಕ್ಷಣಾ ಸಂಚಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎತ್ತಿನಹೊಳೆ...

Rashmi Kasaragodu
Updated On : 6 Jun 2014, 1:23 am

ಮಂಗಳೂರು: ಹಂಪನಕಟ್ಟೆಯಲ್ಲಿ ಸಹ್ಯಾದ್ರಿ ಸಂರಕ್ಷಣಾ ಸಂಚಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎತ್ತಿನಹೊಳೆ ತಿರುವು ಯೋಜನೆ ವಿರೋಧಿಸಿ ಗುರುವಾರ ದಾರಿಹೋಕರಿಗೆ 'ಬೆಲ್ಲ ಬಾಜೆಲ್' (ಬೆಲ್ಲ ನೀರು) ನೀಡಲಾಯಿತು.
ಒಂದಾನೊಂದು ಕಾಲದಲ್ಲಿ ನಗರಕ್ಕೆ ನಡೆದುಕೊಂಡು ಬರುತ್ತಿದ್ದ ಜನರಿಗೆ ದಣಿವಾರಿಸಲು ಈಗಿನ ಹಂಪನಕಟ್ಟೆಯ ತಾಜ್ಮಹಲ್ ಹೊಟೇಲ್ ಎದುರಿನ ಕಟ್ಟೆಯಲ್ಲಿ 'ಅಪ್ಪಣ್ಣ' ಎಂಬುವವರು ಬೆಲ್ಲ ನೀರು ಕೊಡುತ್ತಿದ್ದರು ಎಂಬ ಇತಿಹಾಸವಿದೆ. ಈ ಕಾರಣಕ್ಕೆ ಯೋಜನೆ ಸಂಕಷ್ಟ ತಿಳಿಸಲು ಜನರಿಗೆ ಬೆಲ್ಲ ನೀರು ನೀಡಲಾಯಿತು.
ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement