ದಾಖಲೆ ಪರಿಶೀಲನೆಗೆ ಕೇವಲ 6357 ಅಭ್ಯರ್ಥಿಗಳು ಹಾಜರು
ವೃತ್ತಿ ಶಿಕ್ಷಣ ಕೋರ್ಸ್ಗಳ ಕೌನ್ಸೆಲಿಂಗ್ನ 4ನೇ ದಿನದ ಅಂತ್ಯಕ್ಕೆ ಕೇವಲ 6357 ಅಭ್ಯರ್ಥಿಗಳು ದಾಖಲೆ ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ. 5
ವೃತ್ತಿ ಶಿಕ್ಷಣ ಕೋರ್ಸ್ಗಳ ಕೌನ್ಸೆಲಿಂಗ್ನ 4ನೇ ದಿನದ ಅಂತ್ಯಕ್ಕೆ ಕೇವಲ 6357 ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಮಾಡಿಸಿಕೊಂಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ 13 ಕೇಂದ್ರಗಳಲ್ಲಿ 14 ಸಾವಿರ ರ್ಯಾಂಕ್ವರೆಗಿನ ವಿದ್ಯಾರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಿದ್ದರು. ಆದರೆ ಸುಮಾರು 7643 ವಿದ್ಯಾರ್ಥಿಗಳು ದಾಖಲೆ ಪರಿಶೀಲನೆಯಿಂದ ಹೊರಗುಳಿದಿರುವುದು ಆಶ್ಚರ್ಯ ಮೂಡಿಸಿದೆ. ಇದರಿಂದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಮತ್ತಷ್ಟು ಇಳಿಕೆಯಾಗುವ ಸೂಚನೆ ಈಗಲೇ ದೊರೆಯುತ್ತಿದೆ. ಕಳೆದ ವರ್ಷ 25 ಸಾವಿರಕ್ಕೂ ಅಧಿಕ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿದ್ದವು.
ಅಣಕು ಆಪ್ಶನ್ ಎಂಟ್ರಿ: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುಕ್ರವಾರದಿಂದ ಅಣಕು ಆಪ್ಶನ್ ಎಂಟ್ರಿ ಪ್ರಕ್ರಿಯೆ ಆರಂಭಿಸಲಾಗಿದೆ. ಕಳೆದ ವರ್ಷದ ಸೀಟು ಹಂಚಿಕೆ ಆಧರಿಸಿ ಆಪ್ಶನ್ ಎಂಟ್ರಿ ದಾಖಲಿಸುವ ಅವಕಾಶ ನೀಡಲಾಗಿದೆ.