ಮೋದಿ ಮೊದಲ ವಿದೇಶ ಪ್ರವಾಸ ಭೂತಾನ್‌ಗೆ
ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ವಿದೇಶ ಪ್ರವಾಸವನ್ನು ಭೂತಾನ್‌ನಿಂದ ಆರಂಭಿಸುವ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ವಿದೇಶ ಪ್ರವಾಸವನ್ನು ಭೂತಾನ್‌ನಿಂದ ಆರಂಭಿಸುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಶುಕ್ರವಾರ ಉನ್ನತ ಅಧಿಕಾರಿಗಳ ತಂಡವೊಂದು ರಾಜಧಾನಿ ಥಿಂಪುವಿಗೆ ತೆರಳಲಿದೆ.
ಈ ನಡುವೆ ಮೋದಿ ಅಮೆರಿಕ ಪ್ರವಾಸ ಖಚಿತವಾಗಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಬರಾಕ್ ಒಬಾಮ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮೂಲಗಳ ಪ್ರಕಾರ ಸೆ.26 ಅಥವಾ ಸೆ.30ರಂದು ಮೋದಿ-ಒಬಾಮ ಭೇಟಿ ನಡೆಯಲಿದೆ.