ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸೆಪ್ಟೆಂಬರ್ನಲ್ಲಿ ಪ್ರಧಾನಿ ಅಮೆರಿಕ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಖಚಿತವಾಗಿದೆ.

Rashmi Kasaragodu
Updated On : 6 Jun 2014, 1:08 am

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಖಚಿತವಾಗಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಬರಾಕ್ ಒಬಾಮ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮೂಲಗಳ ಪ್ರಕಾರ ಸೆ.26 ಅಥವಾ ಸೆ.30ರಂದು ಮೋದಿ-ಒಬಾಮ ಭೇಟಿ ನಡೆಯಲಿದೆ.
ಮೇ 16ರಂದು ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ದೂರವಾಣಿ ಮೂಲಕ ಮಾತುಕತೆ ನಡೆಸಿ ಶುಭ ಹಾರೈಸಿದ್ದರು. ಈ ಸಂದರ್ಭದಲ್ಲಿ ಮೋದಿಯವರಿಗೆ ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಅದನ್ನು ಮೋದಿ ಸ್ವೀಕರಿಸಿದ್ದಾರೆ.
ಉಭಯ ನಾಯಕರ ಭೇಟಿ ಬಗ್ಗೆ ಅಮೆರಿಕ ಆಡಳಿತದ ಜತೆ ಚರ್ಚೆ ನಡೆಸುವಂತೆ ವಾಷಿಂಗ್ಟನ್ನಲ್ಲಿರುವ ರಾಯಭಾರಿ ಎಸ್.ಜೈಶಂಕರ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಾಷಿಂಗ್ಟನ್ನಲ್ಲಿ ಅಮೆರಿಕ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಜೈಶಂಕರ್ ಪ್ರಧಾನಿ ಜತೆ ಚರ್ಚಿಸಲಿದ್ದಾರೆ.   2002ರ ಗುಜರಾತ್ ಗಲಭೆ ಹಿನ್ನೆಲೆಯಲ್ಲಿ ಹಿಂದಿನ ಅಮೆರಿಕ ಸರ್ಕಾರ 2005ರಲ್ಲಿ ಮೋದಿಗೆ ನಿಷೇಧ ಹೇರಿತ್ತು.
ಮೊದಲ ಪ್ರವಾಸ ಭೂತನ್?
ನರೇಂದ್ರ ಮೋದಿ ತಮ್ಮ ಅಧಿಕೃತ ವಿದೇಶ ಪ್ರವಾಸವನ್ನು ಭೂತಾನ್ನಿಂದ ಆರಂಭಿಸುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಶುಕ್ರವಾರ ಉನ್ನತ ಅಧಿಕಾರಿಗಳ ತಂಡವೊಂದು ರಾಜಧಾನಿ ಥಿಂಪುವಿಗೆ ತೆರಳಲಿದೆ.
ಹಿಂದಿಯಲ್ಲೇ ಸಂಭಾಷಣೆ
ಪ್ರಧಾನಿ ಮೋದಿ ವಿಶ್ವನಾಯಕರ ಜತೆ ಹಿಂದಿಯಲ್ಲೇ ಸಂಭಾಷಣೆ ನಡೆಸಲು ನಿರ್ಧರಿಸಿದ್ದಾರೆ. ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಬಂದಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್ ಜತೆ ಮೋದಿ ಹಿಂದಿಯಲ್ಲಿ ಚರ್ಚಿಸಿದ್ದರು. ಮುಂದಿನ ದಿನಗಳಲ್ಲಿ ಇತರ ನಾಯಕರ ಜತೆ ಮಾತಾಡುವ ವೇಳೆ ಹಿಂದಿಯಲ್ಲಿ ಮೋದಿ ಉತ್ತರ ನೀಡಲಿದ್ದಾರೆ. ಅದಕ್ಕೆ ಅವರು ಭಾಷಾಂತರಕಾರರ ನೆರವು ಪಡೆಯಲಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದರೂ ವಿದೇಶಿ ನಾಯಕರ ಇಂಗ್ಲಿಷ್ ಶಬ್ದೋಚ್ಚಾರಣೆಯ ಕೆಲವು ವಿಚಾರ ಗೊತ್ತಾಗದೇ ಇದ್ದಾಗ ಭಾಷಾಂತರಕಾರರ ನೆರವು ಪಡೆಯುತ್ತಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement