ಆನೆ ಸಾವು
ಇಲ್ಲಿಗೆ ಸಮೀಪದ ಪಾಲಿಬೆಟ್ಟ- ತಿತಿಮತಿ ವ್ಯಾಪ್ತಿಯ ಕಾಯಂಬೆಟ್ಟ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ 20 ವರ್ಷದ ...
ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಪಾಲಿಬೆಟ್ಟ- ತಿತಿಮತಿ ವ್ಯಾಪ್ತಿಯ ಕಾಯಂಬೆಟ್ಟ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ 20 ವರ್ಷದ ಹೆಣ್ಣಾನೆಯೊಂದು ಮೃತಪಟ್ಟಿದೆ. ವಿದ್ಯುತ್ ತಂತಿ 11 ಕೆ.ವಿ. ಲೇನ್ ಸಡಿಲಗೊಂಡಿದ್ದು, ಕೆಳವರೆಗೆ ಜೋತಾಡುತ್ತಿತ್ತು. ಇದೇ ಮಾರ್ಗವಾಗಿ ಆನೆ ನಡೆಯುತ್ತಿದ್ದಾಗ ಬೆನ್ನಿಗೆ ತಂತಿ ಸ್ಪರ್ಶಗೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಕೇವಲ 5 ಅಡಿ ಕೆಳಮಟ್ಟದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವುದಾಗಿ ತಿತಿಮತಿ ವಲಯಾರಣ್ಯಾಧಿಕಾರಿ ಗೋಪಾಲ್ ತಿಳಿಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜೇ ಗೌಡ ಭೇಟಿ ನೀಡಿ ಪರಿಶೀಲಿಸಿದರು.