ಮರಳಿಗೆ ಭದ್ರತಾ ಪರ್ಮಿಟ್
ಮರಳು ಸಾಗಣೆ ಮಾಡುವ ಲಾರಿಗಳಿಗೆ ಪ್ರತಿ ಲೋಡ್‌ಗೆ ನಕಲು ಮಾಡಲಾಗದ 'ವಿಶಿಷ್ಟ ಭದ್ರತಾ ಪರ್ಮಿಟ್' ನೀಡಲು ...
ಬೆಂಗಳೂರು: ಮರಳು ಸಾಗಣೆ ಮಾಡುವ ಲಾರಿಗಳಿಗೆ ಪ್ರತಿ ಲೋಡ್‌ಗೆ ನಕಲು ಮಾಡಲಾಗದ 'ವಿಶಿಷ್ಟ ಭದ್ರತಾ ಪರ್ಮಿಟ್' ನೀಡಲು ಸರ್ಕಾರ ನಿರ್ಧರಿಸಿದ್ದು, ಜೂ.10ರಿಂದ ಇದು ರಾಜ್ಯಾದ್ಯಂತ ಜಾರಿಗೆ ಬರಲಿದೆ. 'ವಿಶಿಷ್ಟ ಭದ್ರತಾ ಪರ್ಮಿಟ್' ಪೇಪರ್ (ಎಸ್‌ಎಸ್‌ಪಿಪಿ) ಬಳಸಿ ಪರವಾನಗಿ ತಯಾರಿಸಲಾಗಿದ್ದು, ಇದನ್ನು ಜೆರಾಕ್ಸ್ ಅಥವಾ ಫೋಟೋಕಾಪಿ ಮಾಡಿದರೆ 'ಕಾಪಿ' ಎಂದು ದೊಡ್ಡದಾಗಿ ನಮೂದಾಗುತ್ತದೆ. ಹೀಗಾಗಿ ನಕಲು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಅನಧಿಕೃತವಾಗಿ ಮರಳು ಸಾಗಣೆ ತಡೆಯುವ ಜತೆಗೆ ಪರಿಸರ ರಕ್ಷಣೆ ಮಾಡಿದಂತಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಹಾಗೂ ಲೋಕೋಪಯೋಗಿ ಖಾತೆ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.