ಕೈನಿಂದ ಮೋದಿ ಸ್ಪರ್ಧಿಸುತ್ತಿದ್ದರೂ ಸೋಲುತ್ತಿದ್ದರು
'ಒಂದು ವೇಳೆ ನರೇಂದ್ರ ಮೋದಿ ಕಾಂಗ್ರೆಸ್ ಟಿಕೆಟ್ ಪಡಕೊಂಡು...
ನವದೆಹಲಿ: 'ಒಂದು ವೇಳೆ ನರೇಂದ್ರ ಮೋದಿ ಕಾಂಗ್ರೆಸ್ ಟಿಕೆಟ್ ಪಡಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ದ್ದರೂ ಸೋಲು ಅನುಭವಿಸುತ್ತಿದ್ದರು'
- ಇದು ಯಾರ್ಯಾರದ್ದೋ ಹೇಳಿಕೆಯಲ್ಲ. ಕಾಂಗ್ರೆಸ್ನ ಪ್ರಭಾವಿ ನಾಯಕ ಸಂಜಯ್ ನಿರುಪಮ್ ಹೇಳಿಕೆ. ಹೀಗಾಗಿ, ಯುಪಿಎ ಸರ್ಕಾರದ ಆಡಳಿತದಲ್ಲಿ ಹೊರ ಬಂದ ವಿವಿಧ ಹಗರಣಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ ಎನ್ನುವುದನ್ನು ಪಕ್ಷದ ನಾಯಕರೇ ಒಪ್ಪಿಕೊಂಡಂತಾಗಿದೆ. ಈ ಸಲ ಕಾಂಗ್ರೆಸ್ಗೆ ಸಿಕ್ಕಿದ್ದು ಕೇವಲ 44 ಸ್ಥಾನ!
ಸ್ವತಃ ನಿರುಪಮ್ ಮುಂಬೈ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಮಾಜಿ ಸಚಿವರಾದ ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್ ಸೇರಿದಂತೆ ಗಣ್ಯಾತಿಗಣ್ಯರು ಸೋಲು ಅನುಭವಿಸಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಸೋಲಿಗೆ ಯಾರು ಹೊಣೆ ಎಂಬ ಬಗ್ಗೆ ಚರ್ಚೆ ಬಂದಾಗ ಎಲ್ಲರೂ ಹೊಣೆ ಎಂಬ ನಿರ್ಣಯದೊಂದಿಗೆ ಮುಕ್ತಾಯವಾಗಿತ್ತು.