ಯುಪಿ ಬಲಾತ್ಕಾರ ವರ್ಗ
ಉತ್ತರ ಪ್ರದೇಶದಲ್ಲಿ ಬೋರಲು ಬಿದ್ದಿರುವ ಕಾನೂನು ಮತ್ತು ಸುವ್ಯವಸ್ಥೆಗೆ..
ಲಖನೌ: ಉತ್ತರ ಪ್ರದೇಶದಲ್ಲಿ ಬೋರಲು ಬಿದ್ದಿರುವ ಕಾನೂನು ಮತ್ತು ಸುವ್ಯವಸ್ಥೆಗೆ ಅಧಿಕಾರಿಗಳೇ ಬಲಿಪಶುಗಳಾಗಿದ್ದಾರೆ. ಬದೌನ್ ಜಿಲ್ಲೆಯಲ್ಲಿ ಘಟಿಸಿದ್ದ ಅವಳಿ ಹತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ 66 ಐಎಎಸ್ ಮತ್ತು 42 ಐಪಿಎಸ್ ಅಧಿಕಾರಿಗಳನ್ನು ಶನಿವಾರ ವರ್ಗ ಮಾಡಲಾಗಿದೆ.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮುಖ್ಯ ಕಾರ್ಯದರ್ಶಿ ಅಲೋಕ್ ರಂಜನ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ದೀಪಕ್ ಸಿಘಾಲ್, ಪೊಲೀಸ್ ಮಹಾನಿರ್ದೇಶಕ ಎ.ಎಲ್.ಬ್ಯಾನರ್ಜಿ ಅವರೊಂದಿಗೆ ನಡೆಸಿದ ಸಭೆಯಲ್ಲಿ ವರ್ಗಾವಣೆ ನಿರ್ಣಯ ಕೈಗೊಳ್ಳಲಾಯಿತು.
ಬದೌನ್ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಡಿಸಿ ವಿರುದ್ಧವೂ ಕ್ರಮಕ್ಕೆ ನಿರ್ಧರಿಸಲಾಗಿದೆ.