ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾರಂತರ ಮನೆ ಧ್ವಂಸ ಪ್ರಸ್ತಾಪವಿಲ್ಲ: ಉಮಾಶ್ರೀ

ಬಾಲವನದಲ್ಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತರ ಮನೆಯನ್ನು ಕೆಡಹುವ ಪ್ರಸ್ತಾಪ ...

Rashmi Kasaragodu
Updated On : 9 Jun 2014, 1:04 am

ಪುತ್ತೂರು: ಬಾಲವನದಲ್ಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತರ ಮನೆಯನ್ನು ಕೆಡಹುವ ಪ್ರಸ್ತಾಪ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸ್ಪಷ್ಟಪಡಿಸಿದ್ದಾರೆ. ಕಾರಂತರ ಮನೆಯನ್ನು ಪುನರುಜ್ಜೀವನಗೊಳಿಸಲಾಗುವುದು. ಈ ಸಂಬಂಧ ಸ್ಥಳೀಯರ, ಸಾಹಿತಿಗಳ, ಬಾಲವನ ಸಮಿತಿ ಮತ್ತು ಕಾರಂತರ ಪುತ್ರಿ ಕ್ಷಮಾರಾವ್ ಸಲಹೆ ಪಡೆದು ಮುಂದುವರಿಯಲಾಗುವುದು ಎಂದು ಹೇಳಿದ್ದಾರೆ.
ಭಾನುವಾರ ಪುತ್ತೂರಿನ ಡಾ. ಶಿವರಾಮ ಕಾರಂತರ ಬಾಲವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಕಾರಂತರ ಮನೆ ಶಿಥಿಲಗೊಂಡಿರುವ ಕಾರಣ ಸರ್ಕಾರ 30 ಲಕ್ಷ ಬಿಡುಗಡೆ ಮಾಡಿ ಮನೆ ಪುನರ್ ನಿರ್ಮಿಸಲು ಚಿಂತನೆ ನಡೆಸಿತ್ತು. ಈ ಅನುದಾನದಲ್ಲಿ ಮೂಲಸ್ವರೂಪದಲ್ಲೇ ಹೊಸದಾಗಿ ನಿರ್ಮಾಣ ಮಾಡಬಹುದಿತ್ತು. ಆದರೆ ಕಾರಂತರ ಪುತ್ರಿ ಕ್ಷಮಾ ರಾವ್ ಮನೆ ಕೆಡವಬಾರದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮನೆ ಧ್ವಂಸಗೊಳಿಸಬಾರದೆಂಬುದು ಅವರ ಸಲಹೆ ಎಂದು ಉಮಾಶ್ರೀ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement