ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖರ್ಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ

ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಅಧಿಕೃತ ಪ್ರತಿಪಕ್ಷ ಮಾನ್ಯತೆ ನೀಡಲು ಸ್ಪೀಕರ್ ನಿರಾಕರಿಸಿರುವ...

Rashmi Kasaragodu
Updated On : 10 Jun 2014, 3:48 am

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಅಧಿಕೃತ ಪ್ರತಿಪಕ್ಷ ಮಾನ್ಯತೆ ನೀಡಲು ಸ್ಪೀಕರ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷ ನಾಯಕನ ಸ್ಥಾನದಿಂದ ವಂಚಿತರಾಗಿದ್ದಾರೆ.
ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿರುವ ಸ್ಪೀಕರ್ ಸುಮಿತ್ರಾ ಮಹಾಜನ್ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಖರ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಮುಂದುವರಿಯುವರೇ ವಿನಾ ಪ್ರತಿಪಕ್ಷ ನಾಯಕ ಸ್ಥಾನಮಾನ ಪಡೆಯುವುದಿಲ್ಲ. ಪ್ರತಿಪಕ್ಷ ನಾಯಕರಾಗಿದ್ದರೆ ಅವರು ಸಂಪುಟ ಸಚಿವರ ಸ್ಥಾನಮಾನ, ಸಂಬಳ, ಸವಲತ್ತು, ಭತ್ಯೆಗಳಿಗೆ ಅರ್ಹರಾಗುತ್ತಿದ್ದರು.
ಮೊದಲ ಮೂರು ಲೋಕಸಭೆಗಳಲ್ಲಿ, 5ನೇ ಲೋಕಸಭೆ, 7 ಮತ್ತು 8ನೇ ಲೋಕಸಭೆಗಳಲ್ಲೂ ಪ್ರತಿಪಕ್ಷ ನಾಯಕರೇ ಇರಲಿಲ್ಲ. ಸ್ಪೀಕರ್ ಅದನ್ನೇ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ಗೆ ಅಧಿಕೃತ ಪ್ರತಿಪಕ್ಷ ಸ್ಥಾನ ನೀಡದಿರಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement