ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಟಿಡಿಎಸ್

ದಿಕ್ಕು ತಪ್ಪಿರುವ ಆರ್ಥಿಕತೆ ಸರಿದಾರಿಗೆ ತರುವುದು ಮತ್ತು 'ಟಿಡಿಎಸ್' ಸೂತ್ರದೊಂದಿಗೆ ಜಾಗತಿಕ....

Rashmi Kasaragodu
Updated On : 10 Jun 2014, 12:08 pm

ನವದೆಹಲಿ: ದಿಕ್ಕು ತಪ್ಪಿರುವ ಆರ್ಥಿಕತೆ ಸರಿದಾರಿಗೆ ತರುವುದು ಮತ್ತು 'ಟಿಡಿಎಸ್' ಸೂತ್ರದೊಂದಿಗೆ ಜಾಗತಿಕ ಮಟ್ಟದಲ್ಲಿ 'ಬ್ರಾಂಡ್ ಇಂಡಿಯಾ' ನಿರ್ಮಾಣ- ಇವು ಮೋದಿ ಸರ್ಕಾರದ ನೀಲನಕ್ಷೆ.
16ನೇ ಲೋಕಸಭೆ ಅಸ್ತಿತ್ವಕ್ಕೆ ಬಂದ ಬಳಿಕ ಸೋಮವಾರ ಮೊದಲ ಬಾರಿ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ. 50 ನಿಮಿಷಗಳ ಭಾಷಣದಲ್ಲಿ ಮೋದಿಯವರ 2೤3 ಸೂತ್ರದ ಛಾಯೆ. ಬೆಳವಣಿಗೆ ಸಾಧಿಸಲು ಏಗುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡುವುದು ತುರ್ತು ಅಗತ್ಯ ಎನ್ನುವುದನ್ನು ಸರ್ಕಾರ ಮನಗಂಡಿರುವುದು ಸ್ಪಷ್ಟ.
'ಏಕ್ ಭಾರತ್, ಶ್ರೇಷ್ಠ ಭಾರತ್' ಮತ್ತು 'ಸಬ್ ಕೆ ಸಾಥ್, ಸಬ್ ಕಾ ವಿಕಾಸ್' - ಮೋದಿ ಪ್ರಚಾರ ಸಭೆಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದ ವಿಚಾರ. ಜನಸಾಮಾನ್ಯರ ಖುಷಿಗೊಳಿಸುವ ಹಲವು ವಿಚಾರಪ್ರಸ್ತಾಪ. ಇದೆಲ್ಲ ಸಾಧಿಸುವ ಗುಟ್ಟು ಅಡಕವಾಗಿರುವುದು  5 'ಟಿ', 3 'ಡಿ', 3 'ಎಸ್' ಮಂತ್ರದಲ್ಲಿ.
ಸಾಮಾನ್ಯ ಮಾರಾಟ ತೆರಿಗೆ (ಜಿಎಸ್ಟಿ), ನೇರ ವಿದೇಶಿ ಬಂಡವಾಳಕ್ಕೆ ಪ್ರೋತ್ಸಾಹ, ಪ್ರಮುಖ ಕೈಗಾರಿಕೆಗಳಿಗೆ ವಿಳಂಬರಹಿತ ಅನುಮೋದನೆ, ಉದ್ಯೋಗ ಸೃಷ್ಟಿ, ಪಾರದರ್ಶಕ, ನ್ಯಾಯಸಮ್ಮತ ಹಾಗೂ ಊಹಿಸಬಹುದಾದ ವಾತಾವರಣ ನಿರ್ಮಾಣ, ಆಹಾರ ಹಣದುಬ್ಬರಕ್ಕೆ ಕಡಿವಾಣ, ಹೂಡಿಕೆ-ಉದ್ಯಮ-ಆರ್ಥಿಕ ಬೆಳವಣಿಗೆ ಉತ್ತೇಜಿಸಲು ವ್ಯತಿರಿಕ್ತವಲ್ಲದ ತೆರಿಗೆ ವ್ಯವಸ್ಥೆ ಇವು ಮೋದಿ ಸರ್ಕಾರ ಪ್ರಕಟಿಸಿರುವ ಪ್ರಮುಖ ಕ್ರಮ.



ಟಿಡಿಎಸ್ನಲ್ಲಿ ಏನಿದೆ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement