ನಮ್ಮಲ್ಲೇ ನಭಕ್ಕೆ ನೆಗೆದ ಬ್ರಹ್ಮೋಸ್
ಇಲ್ಲಿನ ಸೀಬರ್ಡ್ ನೌಕಾನೆಲೆ ಸೋಮವಾರ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ...
ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆ ಸೋಮವಾರ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಜಾಗತಿಕ ಗಮನ ಸೆಳೆದಿದೆ. 290 ಕಿ.ಮೀ. ವ್ಯಾಪ್ತಿಯ ಈ ಸೂಪರ್ ಸಾನಿಕ್ ಕ್ಷಿಪಣಿಯನ್ನು ಐಎನ್ಎಸ್ ಕೋಲ್ಕೊತಾ ಯುದ್ಧ ನೌಕೆಯಿಂದ ಉಡಾವಣೆ ಮಾಡಲಾಯಿತು. ದೇಶಿ ನಿರ್ಮಿತ ಯುದ್ಧ ನೌಕೆ ಐಎನ್ಎಸ್ ಕೋಲ್ಕೊತಾ 16 ಬ್ರಹ್ಮೋಸ್ ಕ್ಷಿಪಣಿಗಳನ್ನು ಹೊತ್ತೊಯ್ದು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದ್ದು, 15-ಅಲ್ಫಾ ಸರಣಿಗೆ ಸೇರಿದ ಈ ಯುದ್ಧನೌಕೆ ಸೋಮವಾರ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿತು. ಸೀಬರ್ಡ್ ನೌಕಾನೆಲೆಯಿಂದ ಕ್ಷಿಪಣಿ ಉಡಾವಣೆ ಇದೇ ಮೊದಲು.