ಗಂಗೆಯಲ್ಲಿ ಉಗುಳಿದ್ರೆ ಮೂರು ವರ್ಷ ಜೈಲು!
ನವದೆಹಲಿ: ಪವಿತ್ರ ಗಂಗಾ ನದಿಯಲ್ಲಿ ಉಗುಳುವುದಾಗಲೀ, ತ್ಯಾಜ್ಯ ಎಸೆಯುವುದಾಗಲೀ ಮಾಡಿದರೆ ಮೂರು ವರ್ಷ ಜೈಲು ಅಥವಾ 10 ಸಾವಿರ ದಂಡ! ಇದು ಗಂಗಾ ನದಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಇಡಲು ಚಿಂತಿಸುತ್ತಿರುವ ಪ್ರಥಮ ಹೆಜ್ಜೆ. ಚುನಾವಣೆ ವೇಳೆ ವಾರಾಣಸಿಯಲ್ಲಿ ಕಣಕ್ಕಿಳಿದಿದ್ದ ಮೋದಿ 'ಗಂಗೆಯನ್ನು ಸ್ವಚ್ಛಗೊಳಿಸುವ ಹೊಣೆ ನನ್ನದು' ಎಂದಿದ್ದರು.