ಮತ್ತೊಂದು ದಾಳಿಗೆ ಉಗ್ರರ ವಿಫಲ ಯತ್ನ
ಕರಾಚಿ: ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಒಂದಿಡೀ ರಾತ್ರಿ ನಿಯಂತ್ರಣಕ್ಕೆ ಪಡೆದುಕೊಂಡಿದ್ದ ತಾಲಿಬಾನ್ ಉಗ್ರರು ಮಾರನೇ ದಿನವೂ ತಮ್ಮ ಅಟಾಟೋಪ ಮುಂದುವರಿಸಲು ನಡೆಸಿದ ಯತ್ನ ವಿಫಲವಾಗಿದೆ. ಮಂಗಳವಾರ ಏರ್ಪೋರ್ಟ್ ಭದ್ರತಾ ಪಡೆಯ ತರಬೇತಿ ಕೇಂದ್ರದ ಮೇಲೆ ಉಗ್ರರು ದಾಳಿ ನಡೆಸಿದ್ದು, ಸೇನಾಪಡೆ ಪ್ರತಿದಾಳಿ ನಡೆಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.