ಯುಪಿಎ ಅವಧಿಯಲ್ಲಿದ್ದ 4 ಸಂಪುಟ ಸಮಿತಿ ರದ್ದು
ನವದೆಹಲಿ: ಉನ್ನತಾಧಿಕಾರ ಸಚಿವರ ಸಮಿತಿಗಳನ್ನು ವಜಾ ಮಾಡಿದ ಬಳಿಕ ಈಗ ಪ್ರಧಾನಿ ನರೇಂದ್ರ ಮೋದಿ ಯುಪಿಎ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ನಾಲ್ಕು ಸ್ಥಾಯಿ ಸಮಿತಿಗಳನ್ನು ರದ್ದು ಮಾಡಿದ್ದಾರೆ. ಈ ಮೂಲಕ 'ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ' ಎಂಬ ತಮ್ಮ ಘೋಷಣೆಗೆ ಮತ್ತಷ್ಟು ಬಲ ನೀಡಿದ್ದಾರೆ. ನೈಸರ್ಗಿಕ ವಿಕೋಪ ನಿರ್ವಹಣೆ, ದರ, ವಿಶ್ವ ವ್ಯಾಪಾರ ಸಂಸ್ಥೆಯ ವಿಚಾರ ಹಾಗೂ ಆಧಾರ್ಗೆ ಸಂಬಂಧಿಸಿದ ಸಂಪುಟ ಸಮಿತಿಗಳನ್ನು ರದ್ದು ಮಾಡಿ ಮೋದಿ ಆದೇಶಿಸಿದ್ದಾರೆ.