ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕನ್ನಡಕ್ಕೂ ಇದೆ ಭವಿಷ್ಯ

ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯವಿಲ್ಲ ಎನ್ನುವ ಆಂಗ್ಲ ಭಾಷಾ ವ್ಯಾಮೋಹಿ...

Rashmi Kasaragodu
Updated On : 13 Jun 2014, 10:18 am

ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯವಿಲ್ಲ ಎನ್ನುವ ಆಂಗ್ಲ ಭಾಷಾ ವ್ಯಾಮೋಹಿಗಳಿಗೆ ಕನ್ನಡದಲ್ಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು 25ನೇ ರ್ಯಾಂಕ್ ಪಡೆಯುವ ಮೂಲಕ ಧಾರವಾಡದ ಗುರುದತ್ತ ಹೆಗಡೆ ಉತ್ತರ ನೀಡಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಹಾಗೂ ಇನ್ನಿತರ ನಾಗರಿಕ ಸೇವೆಗಳಿಗೆ ನಡೆಸಿದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದ 45 ಮಂದಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ ಹಲವರು ಗ್ರಾಮೀಣ ಹಿನ್ನೆಲೆಯುಳ್ಳವರಾದರೆ ಧಾರವಾಡದ ಗುರುದತ್ತ ಹೆಗಡೆ ಐಚ್ಛಿಕ ಹಾಗೂ  ಸಾಮಾನ್ಯ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲೇ ಬರೆದು ಉತ್ತೀರ್ಣರಾಗಿದ್ದಾರೆ. ಇದರ ಜತೆಗೆ ಪರೀಕ್ಷೆಯಲ್ಲಿ ಪಾಸಾದ ಇನ್ನು ಹಲವರು ತಮ್ಮ ಐಚ್ಛಿಕ ವಿಷಯವಾಗಿ ಕನ್ನಡ ಸಾಹಿತ್ಯವನ್ನೇ ಆಯ್ದುಕೊಂಡಿದ್ದು ಇನ್ನೊಂದು ವಿಶೇಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement