ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲೋಕ ಸೇವೆಯಲ್ಲಿ ಕನ್ನಡ ಪ್ರಭೆ

ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) ಕಳೆದ ವರ್ಷ ನಡೆಸಿದ ನಾಗರಿಕ ಸೇವೆಗಳ ಪರೀಕ್ಷಾ ...

Rashmi Kasaragodu
Updated On : 13 Jun 2014, 1:05 am

ಕನ್ನಡದಲ್ಲೇ ಬರೆದು ಮೆರೆದ ಗುರುದತ್ತ, ಆಂಗ್ಲ ವ್ಯಾಮೋಹಿಗಳಿಗೆ ಉತ್ತರ


ಪಿಟಿಐ    ನವದೆಹಲಿ    ಜೂ. 12
ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) ಕಳೆದ ವರ್ಷ ನಡೆಸಿದ ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರನ್ನು ಸೋಲಿಸಿ ಪುರುಷ ಅಭ್ಯರ್ಥಿಯೊಬ್ಬರು ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ರಾಜಸ್ಥಾನದ ಗೌರವ್ ಅಗರ್ವಾಲ್ ಈ ಹೆಗ್ಗಳಿಕೆಗೆ ಪಾತ್ರರಾದವರು. ದೆಹಲಿಯ ಮುನೀಶ್ ಶರ್ಮಾ ಹಾಗೂ ರಚಿತ್ ರಾಜ್ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ರ್ಯಾಂಕ್ ವಿಜೇತರ ಪಟ್ಟಿಯ ಮೊದಲ 25 ಸ್ಥಾನಗಳಲ್ಲಿ 24 ಅಭ್ಯರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದರೆ, ಇಬ್ಬರು ಅಭ್ಯರ್ಥಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದಾರೆ. ಈ 25 ಅಭ್ಯರ್ಥಿಗಳಲ್ಲಿ 15 ಪುರುಷರು ಹಾಗೂ 10 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಹೀಗಾಗಿ ಈ ಬಾರಿಯ ಲೋಕಸೇವಾ ಆಯೋಗದ ಪರೀಕ್ಷಾ ಫಲಿತಾಂಶ, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಪರೀಕ್ಷೆ ಪಾಸು ಮಾಡಲು ಸಾಧ್ಯವಿಲ್ಲ ಎಂಬ ಆರೋಪವನ್ನು ಸುಳ್ಳಾಗಿಸಿದೆ. ಇನ್ನೊಂದೆಡೆ, ಇಂಗ್ಲಿಷ್ನಿಂದಲೇ ಭವಿಷ್ಯ ಎಂಬ ಮಿಥ್ಯೆಯನ್ನೂ ಹೊಡೆದುಹಾಕಿದೆ.
ಧಾರವಾಡದ ಗುರುದತ್ತ ಹೆಗಡೆ ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ್ದು ಮಾತ್ರವಲ್ಲ ಪರೀಕ್ಷೆಯಲ್ಲಿ ತೇರ್ಗಡೆಯಾದ 1122 ಜನರ ಪೈಕಿ ಮೊದಲ 25ರ ಪಟ್ಟಿಯಲ್ಲಿದ್ದಾರೆ. ಉಳಿದಂತೆ ದೀಪಕ್ ಪದ್ಮಕುಮಾರ್ 31ನೇ ರ್ಯಾಂಕ್, ಹುಬ್ಬಳ್ಳಿಯ ಲಕ್ಷ್ಮಣ ನಿಂಬರಗಿ 104 ನೇ ರ್ಯಾಂಕ್, ಬೆಂಗಳೂರಿನ ಲಕ್ಷ್ಮಿ ಪ್ರಸಾದ್ 151 ನೇ ರ್ಯಾಂಕ್ ಪಡೆದಿದ್ದಾರೆ.


ಈ ಬಾರಿ ರಾಜ್ಯದ 45 ಮಂದಿ ತೇರ್ಗಡೆ



  ಧಾರವಾಡದ ಗುರುದತ್ ಹೆಗಡೆ- 25, ಟಿ  ದೀಪಕ್ ಪದ್ಮಕುಮಾರ್- 31, ಟಿ  ಲಕ್ಷ್ಮಣ ನಿಂಬರಗಿ-104, ಟಿ  ಬೆಂಗಳೂರಿನ ಬಿ.ಎಂ.ಲಕ್ಷ್ಮಿ ಪ್ರಸಾದ್ 151, ಟಿ  ಆರ್ . ಆದಿತ್ಯ- 197, ಟಿ  ಅಖಿಲ್ ಮಲ್ಲಿಕಾರ್ಜುನ ಶಾಸ್ತ್ರಿ- 240, ಟಿ  ಸಿ.ಟಿ.ಶಿಲ್ಪಾನಾಗ್- 311, ಟಿ  ಬಿ.ನಾಗೇಶ್ ಕುಮಾರ್- 314, ಟಿ  ರವೀಂದ್ರ ಹತ್ತಳ್ಳಿ- 364, ಟಿ  ಅಭಿಶೇಕ್ ರಟ್ಕಾಲ್- 372, ಟಿ  ಮಂಜುನಾಥ್ ಪಿ.ಸಿ.- 485, ಟಿ  ಎಸ್.ಮೃತ್ಯಂಜಯ್- 410, ಟಿ  ಶ್ರೇಯಸ್ ಜಿ.ಹೊಸೂರ್- 430, ಟಿ  ಬಿ.ಕೆ.ರಾಹುಲ್ ಹೆಗಡೆ- 435, ಟಿ  ಜೆ.ಎಂ.ಟಿ. ಅರ್ಜುನ್ ಪ್ರಧಾನ- 442, ಟಿ  ಭಾಗೀರಥಿ ಗೋಯಂಕರ್- 450, ಟಿ  ಜಿ.ಎಂ.ವಿನಯ್- 459, ಟಿ  ಆಸೀಂ ಅನ್ವರ್ -486, ಟಿ  ರಕ್ಷಿತಾ ಕೆ.ಮೂರ್ತಿ- 512, ಟಿ  ವಿ.ಸುನೀಲ್- 516, ಟಿ  ಎನ್.ಪಿ.ಮಧು-517, ಟಿ  ಅನೀಶ್ ಹೆಗ್ಡೆ - 597, ಟಿ  ಬಿ.ಪ್ರಿಯಾಂಕಾ- 642, ಟಿ  ವೆಂಕಟೇಶ್ ಧೋತ್ರಿ- 653, ಟಿ  ಅಜಿತ್ ಸಿಂಗ್ ಠಾಕೂರ್ - 671, ಟಿ  ನವೀನ್ ಆರ್.ಗೌಡ- 678, ಟಿ  ಪಿ.ರಾಘವೇಂದ್ರ- 669, ಟಿ  ರವಿಕುಮಾರ್- 797, ಟಿ  ಕೆ.ಕಿರಣ್ಕುಮಾರ್- 805, ಟಿ  ಕೆ.ಎಂ.ಶ್ರೇಯಸ್- 819, ಟಿ  ಜಿ.ಎಂ.ಶಿವಶರಣಪ್ಪ - 831, ಟಿ  ದ್ಯಾಮಪ್ಪ ಐರಾನಿ - 833, ಟಿ  ಚೇತನ್.ಆರ್- 814, ಟಿ  ಟಿ.ಎ.ಕಿರಣ್- 854, ಟಿ  ಉಮೇಶ್ ರಾಥೋಡ್- 939, ಟಿ  ಡಿ.ಚೇತನ್ಕುಮಾರ್ -945, ಟಿ  ಪ್ರಿಯಾಂಕಾ ಎಲ್.ನಾಯಕ್ -947, ಟಿ  ಎಂ.ಡಿ.ವಿಜಯ್ಕುಮಾರ್ -964




ಗ್ರಾಮೀಣ ಸೇವೆಯ ಆಸೆ

ಸಾಧನೆಗೆ ತಂದೆ-ತಾಯಿ, ಗುರುಗಳು, ಸ್ನೇಹಿತರೇ ಕಾರಣ.  ಓದಲು ಎಲ್ಲ ಸೌಕರ್ಯವಿತ್ತು. ಸ್ವ-ಅಧ್ಯಯನ, ಗೆಳೆಯರ ಜತೆಗೆ ಚರ್ಚೆ, ಜತೆಗೆ ಪತ್ರಿಕೆಗಳನ್ನೂ ಓದುತ್ತಿದ್ದೆ. ಗುರುಗಳಾದ ಮಹಾಂತೇಶ ಬೀಳಗಿ ಮಾರ್ಗದರ್ಶನವೂ ಚೆನ್ನಾಗಿ ದೊರೆಯಿತು. ದೆಹಲಿಯ ಶ್ರೀರಾಮ ಐಎಎಸ್ ಸಂಸ್ಥೆಯಲ್ಲಿ ತರಬೇತಿ ಪಡೆದೆ. ಗ್ರಾಮೀಣಾಭಿವೃದ್ಧಿ ಅಥವಾ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸೇವೆಯ ಇಚ್ಛೆಯಿದೆ. ಸ್ನೇಹಿತ ಲಕ್ಷ್ಮಣ ನಿಂಬರಗಿ ರ್ಯಾಂಕ್ ಪಡೆದದ್ದು ಖುಷಿ ಹೆಚ್ಚಿಸಿದೆ.
- ಗುರುದತ್ತ ಹೆಗಡೆ

1,228ಹುದ್ದೆ


3,003     ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ


326      ಹಿಂದುಳಿದ ವರ್ಗ


187     ಪರಿಶಿಷ್ಟ ಜಾತಿ

1,122ಅಂತಿಮವಾಗಿ ತೇರ್ಗಡೆಯಾದವರು


7,76,565ಅಭ್ಯರ್ಥಿಗಳು

3,23,949     ಪರೀಕ್ಷೆಗೆ ಹಾಜರಾದವರು


14,959ಮುಖ್ಯ ಪರೀಕ್ಷೆಗೆ ಹಾಜರಾದವರು


517 ಅಭ್ಯರ್ಥಿಗಳು ಸಾಮಾನ್ಯ ವರ್ಗ

92ಪರಿಶಿಷ್ಟ ಪಂಗಡಗಳ ಅಭ್ಯರ್ಥಿ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement