ಕೊಳವೆ ಬಾವಿಗೆ ಬಿದ್ದ ಬಾಲಕಿ
ರಾಜ್ಯದಲ್ಲಿ ತೆರೆದ ಕೊಳವೆಬಾವಿಗೆ ಕಂದಮ್ಮ ಬೀಳುವ ಪ್ರಕರಣ ಮತ್ತೆ ...
ಬಿಜಾಪುರ: ರಾಜ್ಯದಲ್ಲಿ ತೆರೆದ ಕೊಳವೆಬಾವಿಗೆ ಕಂದಮ್ಮ ಬೀಳುವ ಪ್ರಕರಣ ಮತ್ತೆ ವರದಿಯಾಗಿದೆ. ಬಿಜಾಪುರ ತಾಲೂಕಿನ ದ್ಯಾಬೇರಿಯಲ್ಲಿ ಮಂಗಳವಾರ ರಾತ್ರಿ 4 ವರ್ಷದ ಬಾಲಕಿಯೊಬ್ಬಳು ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾಳೆ. ಆಕೆಯನ್ನು ಅಕ್ಷತಾ ಹಣಮಂತ ಪಾಟೀಲ (4) ಎಂದು ಗುರುತಿಸಲಾಗಿದೆ.
ತಂದೆ ಹಣಮಂತನ ಜೊತೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಗು ಜೋರಾಗಿ ಚೀರಿಕೊಂಡ ತಕ್ಷಣ ತಂದೆ ಹಿಂತಿರುಗಿ ನೋಡಿದ್ದಾರೆ. ಬೋರ್‌ವೆಲ್ ಬಳಿಗೆ ಹೋಗಿ ನೋಡುವಷ್ಟರಲ್ಲಿ ಪುತ್ರಿ 50 ಅಡಿ ಆಳಕ್ಕೆ ಬಿದ್ದುಬಿಟ್ಟಿದ್ದಳು. ಸುದ್ದಿ ತಿಳಿದ ತಕ್ಷಣ ಎಸ್‌ಪಿ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕತ್ತಲು ಆವರಿಸಿದ್ದರೂ ಲೈಟ್‌ಗಳ ಸಹಾಯದಿಂದ ತಡ ರಾತ್ರಿಯೂ ರಕ್ಷಣಾ ಕಾರ್ಯ ಮುಂದುವರಿದಿತ್ತು. ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಹಣಮಂತ ಕೆಲಸಕ್ಕಾಗಿ ಜಿಲ್ಲೆಗೆ ಬಂದಿದ್ದರು.