ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಕೈಲಿದೆ ರೇಲ್ವೆ ದರ ಏರಿಕೆ ಭವಿಷ್ಯ

ರೇಲ್ವೆ ಪ್ರಯಾಣ ದರ, ಸರಕು- ಸಾಗಣೆ ದರ ಹೆಚ್ಚಳ ಎರಡೂ ಈಗ ಪ್ರಧಾನಿ ಮೋದಿ ಮುಂದಿದೆ...

Mainashree
Updated On : 17 Jun 2014, 10:56 am

ನವದೆಹಲಿ: ರೇಲ್ವೆ ಪ್ರಯಾಣ ದರ, ಸರಕು- ಸಾಗಣೆ ದರ ಹೆಚ್ಚಳ ಎರಡೂ ಈಗ ಪ್ರಧಾನಿ ಮೋದಿ ಮುಂದಿದೆ.
ಮಂಗಳವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆ ಚರ್ಚಿಸಿರುವ ರೇಲ್ವೆ ಸಚಿವ ಡಿ.ವಿ. ಸದಾನಂದ ಗೌಡರು, 'ನಮ್ಮ ಯೋಜನಾ ಗುರಿ ಮುಂದಿನ 5 ವರ್ಷದ ವರೆಗೆ. ಕೇವಲ 100 ದಿನಕ್ಕಲ್ಲ. ದರ ಏರಿಕೆ ಬಗ್ಗೆ ಶೀಘ್ರದಲ್ಲೇ ಪ್ರಧಾನಿಯವರನ್ನು ಭೇಟಿಯಾಗುವೆ' ಎಂದಿದ್ದಾರೆ.
ಆರ್ಥಿಕವಾಗಿ ಹಳಿ ತಪ್ಪಿರುವ ಭಾರತೀಯ ರೇಲ್ವೆ ಮರಳಿ ಹಳಿಗೆ ಬರಲು ಪ್ರಯಾಣಿಕರ ಜೇಬಿನ ಮೇಲೆ ಕಣ್ಣಿಟ್ಟಿರುವುದಂತೂ ಹೌದು. ಪ್ರಯಾಣಿಕರ ದರದಲ್ಲಿ ಹೆಚ್ಚಳ ಪರಿಷ್ಕರಣಾ ದರವನ್ನು ಶೀಘ್ರದಲ್ಲೇ ಮಂಡಿಸಲು ರೇಲ್ವೆ ಮಂಡಳಿ ಈಗಾಗಲೇ ಲೆಕ್ಕಿಸತೊಡಗಿದೆ.
ಜುಲೈ 2ನೇ ವಾರ ಬಜೆಟ್: ಜುಲೈ ಎರಡನೇ ವಾರದಲ್ಲಿ ರೇಲ್ವೆ ಬಜೆಟ್ ನಡೆಯಲಿದೆ. ಸಾಮಾನ್ಯವಾಗಿ ದರಗಳನ್ನು ಬಜೆಟ್‌ನ ಮೊದಲು ಅಥವಾ ನಂತರ ನಿರ್ಧರಿಸುವುದು ವಾಡಿಕೆ. ಈಗಾಗಲೇ ಒಂದು ಹಂತದಲ್ಲಿ ಅಂದರೆ ಚುನಾವಣಾ ಫಲಿತಾಂಶ ಬಂದ ಕೂಡಲೇ ದರ ಏರಿಸಲಾಗಿತ್ತು..
ಪ್ರಯಾಣಿಕರ ಸಂಖ್ಯೆ ಕುಸಿತ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತವೇ ಟಿಕೆಟ್ ದರ ಏರಿಕೆಗೆ ಮೊದಲ ಕಾರಣ. ಕಳೆದ ಆರ್ಥಿಕ ವರ್ಷದ ಆರಂಭದಲ್ಲೇ  18 ದಶಲಕ್ಷ ಪ್ರಯಾಣಿಕರ ಕೊರತೆಯನ್ನು ಇಲಾಖೆ ಕಂಡಿದೆ. ಈ ನಷ್ಟವನ್ನು ಸರಿದೂಗಿಸಲು ಸರಕು ಸಾಗಣೆ- ಪ್ರಯಾಣಿಕರ ಟಿಕೆಟ್ ದರ ಹೆಚ್ಚಳದಿಂದ ಮಾತ್ರ ಸಾಧ್ಯ ಎನ್ನುತ್ತವೆ ಮಂಡಳಿ ಮೂಲಗಳು.
ಮೇಲ್ದರ್ಜೆ ವಿಭಾಗದಲ್ಲಿ ಹೆಚ್ಚಳ: ಅಷ್ಟಕ್ಕೂ ಈ ದರ ಹೆಚ್ಚಳದ ಹೊರೆ ಸಾಮಾನ್ಯ ವರ್ಗಕ್ಕೇನೂ ತಟ್ಟುವುದಿಲ್ಲ. ಎಸಿ ಕ್ಲಾಸ್ ವಿಭಾಗದಲ್ಲಿ ಪ್ರಯಾಣದ ದರ ಏರಿಕೆ ಹೆಚ್ಚಲಿದೆ. ಮುಂಗಡ ಟಿಕೆಟ್ ಹಾಗೂ ಟಿಕೆಟ್ ರದ್ದತಿ ದರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ.  ಆಕರ್ಷಣೆ ಕಳೆದುಕೊಳ್ಳುತ್ತಿರುವ ರೇಲ್ವೆಗೆ ಹೊಸ ರೂಪ ಕೊಡುವುದರ ಬಗ್ಗೆಯೂ ಚಿಂತನೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement