ಇಸ್ರೇಲ್‌ನ ನಾಲ್ಕು ಜೀಬ್ರಾಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತ
ಮೈಸೂರು: ಇಸ್ರೇಲ್‌ನ ರಾಮತ್ ಗಾನ್ (ಸಫಾರಿ) ಟೆಲ್ ಅವಿವ್ ಮೃಗಾಲಯದಿಂದ ಇತ್ತೀಚೆಗೆ ತರಲಾದ ನಾಲ್ಕು ಜೀಬ್ರಾಗಳನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದರು. ಏ. 25 ರಂದು ಆಗಮಿಸಿದ ಈ ನಾಲ್ಕು ಜೀಬ್ರಾಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಅವುಗಳ ಆರೋಗ್ಯ ಮತ್ತು ಇಲ್ಲಿನ ಪರಿಸರಕ್ಕೆ ಹೊಂದುಕೊಳ್ಳುವವರೆಗೆ ಸಾರ್ವಜನಿಕ ವೀಕ್ಷಣೆಗೆ ಬಿಡಬಾರದು ಎಂಬ ಕಾರಣಕ್ಕೆ ಪರದೆಯಿಂದ ಮುಚ್ಚಿದ ಜೀಬ್ರಾ ಮನೆಗೆ ಬಿಡಲಾಗಿತ್ತು. ಇಂದು ತೆರೆ ಸರಿಸುವ ಮೂಲಕ ಪ್ರಮೋದಾದೇವಿ ಒಡೆಯರ್ ನಾಲ್ಕೂ ಜೀಬ್ರಾಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದರು.