ಬ್ರೆಜಿಲ್ ಗೆದ್ದರೆ ಏನು ಮಾಡುತ್ತೇನೊ ಗೊತ್ತಿಲ್ಲ: ಪೂನಂ ಪಾಂಡೆ
ಹೆಸರು ಕೇಳಿದರೆ ಯುವಕರ ಹೃದಯ ಬಡಿತ..
ಮೈಸೂರು: ಹೆಸರು ಕೇಳಿದರೆ ಯುವಕರ ಹೃದಯ ಬಡಿತ ಹೆಚ್ಚುವ ಚಿತ್ರನಟಿ ಪೂನಂ ಪಾಂಡೆ ಬುಧವಾರ ಮೈಸೂರಿಗೆ ಆಗಮಿಸಿದ್ದರು.
'ಲವ್ ಈಸ್ ಪಾಯಿಸನ್' ಚಿತ್ರದ ಪ್ರಚಾರಕ್ಕಾಗಿ ಮೈಸೂರಿಗೆ ಆಗಮಿಸಿದ್ದ ನಟಿ ಪೂನಂ ಪಾಂಡೆ ಅವರು, ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪೂನಂ ಪಾಂಡೆ, ಈ ಬಾರಿಯ ವಿಶ್ವಕಪ್ ಫುಟ್ಬಾಲ್ನಲ್ಲಿ ನನ್ನ ಮೆಚ್ಚಿನ ತಂಡ ಬ್ರೆಜಿಲ್ ಜಯಗಳಿಸಿದರೆ ಏನು ಮಾಡುತ್ತೇನೆ ಎಂಬುದೇ ಗೊತ್ತಿಲ್ಲ. ನಾನು ಈಗ ದೇವಸ್ಥಾನದಲ್ಲಿದ್ದೇನೆ. ಆದ್ದರಿಂದ ಈ ಸಂಬಂಧ ಬೇರೇನೂ ಹೇಳಲು ಇಷ್ಟಪಡುವುದಿಲ್ಲ.
ಈಗ ಒಂದು ಕಿರು ಚಿತ್ರವನ್ನು ಬಿಡುಗಡೆಗೊಳಿಸಿದ್ದೇನೆ. ಮುಂದೆ ಮತ್ತೊಂದು ದೊಡ್ಡ ಚಿತ್ರದ ತುಣುಕನ್ನು ಬಿಡುಗಡೆಗೊಳಿಸುವುದಾಗಿ ಹೇಳಿದರು.
'ಲವ್ ಈಸ್ ಪಾಯಿಸನ್' ಚಲನಚಿತ್ರದ ಪ್ರಚಾರಕ್ಕಾಗಿ ಮೈಸೂರಿಗೆ ಆಗಮಿಸಿದ್ದೇನೆ. ಇದೆ ವೇಳೆ ಜಂಗಲ್ ಜಾಕಿ ಚಿತ್ರದ ನಾಯಕ ರಾಜೇಶ್ ಸಾವಿಗೆ ಕಾರಣ ಏನು ಎಂಬುದು ನನಗೆ ತಿಳಿದಿಲ್ಲ. ಇಂದು ಅವರ ಹಾಡಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು. ನಿರ್ಮಾಪಕ ಕೇಶವಮೂರ್ತಿ ಮತ್ತು ಚಿತ್ರ ತಂಡದ ಸದಸ್ಯರು ಇದ್ದರು.