ಅಕ್ಷತಾ ಅಂತ್ಯಕ್ರಿಯೆ
ಬಿಜಾಪುರ: ತಾಲೂಕಿನ ದ್ಯಾಬೇರಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಬಾಲಕಿ ಅಕ್ಷತಾಳ ಅಂತ್ಯಕ್ರಿಯೆ ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ನೆರವೇರಿಸಲಾಯಿತು. ಇದಕ್ಕೂ ಮೊದಲು ರಾತ್ರಿ 11 ಗಂಟೆಗೆ ಬಾಲಕಿ ಶವವನ್ನು ಮೇಲೆತ್ತಲಾಯಿತು. ದ್ಯಾಬೇರಿಯಲ್ಲಿ ಬಾಲಕಿಯ ಬಲಿ ತೆಗೆದುಕೊಂಡ ಕೊಳವೆ ಬಾವಿಯಿಂದ 300 ಮೀ. ಹತ್ತಿರದಲ್ಲೇ ಅಂತ್ಯಕ್ರಿಯೆ ನೆರವೇರಿತು.