ಅನಂತಮೂರ್ತಿ ವಿರುದ್ಧ ಮೊಕದ್ದಮೆ
ಮಂಗಳೂರು: 'ದೆವ್ವದ ಕಲ್ಲಿನ ಮೇಛಲೆ ಮೂತ್ರಿಸಿದ್ದೇನೆ' ಎಂದು ಕೃತಿಯಲ್ಲಿ ಬರೆದ ಡಾ. ಯು.ಆರ್. ಅನಂತಮೂರ್ತಿ ವಿರುದ್ಧ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆತ್ತಲಪೂಜೆ ಏಕೆ ಮಾಡಬಾರದು ಎಂಬ ಪುಸ್ತಕದಲ್ಲಿ ಹಿಂದೂಗಳು ಪಂಜುರ್ಲಿ ದೈವದ ಕೋಲವನ್ನು ನಟನೆ ಎಂದು ಹೇಳಿ, 'ಅದೇ ದೈವದ ಕಲ್ಲಿಗೆ ಉಚ್ಚೆ ಹೊಯ್ದಿದ್ದೇನೆ' ಎಂದು ಹಿಂದೂಗಳ ನಂಬಿಕೆಗೆ ಘಾಸಿ ಮಾಡಿದ್ದಾರೆಂದು ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಪುನೀತ್ ಕೊಟ್ಟಾರಿ ದೂರು ನೀಡಿ ವಸಂತ ಪ್ರಕಾಶನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.