ಒಂದು ದಿನ ನ್ಯಾಯಾಂಗ ವಶಕ್ಕೆ ಶರವಣ್
ಕೊಳ್ಳೇಗಾಲ: ಕಾಡುಗಳ್ಳ ಶರವಣನನ್ನು ರಾಜ್ಯ ಅರಣ್ಯಾಧಿಕಾರಿಗಳು ತಮಿಳುನಾಡಿನಿಂದ ರಾಜ್ಯಕ್ಕೆ ಕರೆತಂದು ಕೊಳ್ಳೇಗಾಲ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು 1 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಶುಕ್ರವಾರ ತಮಿಳುನಾಡಿನ ಸೇಲಂ ಜೈಲಿನಿಂದ ಕರೆತಂದ ಮಹದೇಶ್ವರ ವನ್ಯಧಾಮದ ವಲಯ ಅರಣ್ಯಾಧಿಕಾರಿ ಹನುಮಂತಯ್ಯ ನೇತೃತ್ವದ ತಂಡ ನ್ಯಾಯಾಧೀಶ ಪುರುಷೋತ್ತಮ್ ನೇತೃತ್ವದಲ್ಲಿ ಆರೋಪಿಯನ್ನು ಕರೆತಂದು ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದರು. ವಿಚಾರಣೆಗೆ 3 ದಿನಗಳ ಕಾಲಾವಕಾಶ ನೀಡಲು ಅರಣ್ಯಾಧಿಕಾರಿಗಳು ನ್ಯಾಯಾಧೀಶರನ್ನು ಈ ಸಂದರ್ಭದಲ್ಲಿ ಕೋರಿದರು. ಆದರೆ ನ್ಯಾಯಾಧೀಶ ಪುರುಷೋತ್ತಮ್ ಅವರು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.