ಪರಮೇಶ್ವರ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಶ್ರಮಿಸಿದ ಡಾ. ಜಿ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ನವದೆಹಲಿಯ ಅಖಿಲ ಭಾರತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕ ಕಲ್ಯಾಣ ಸಂಘಗಳ ಒಕ್ಕೂಟ ಅಧ್ಯಕ್ಷ ಡಾ. ಹನುಮಂತಪ್ಪ ಒತ್ತಾಯಿಸಿದರು. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಗೆದ್ದ 9 ಅಭ್ಯರ್ಥಿಗಳಲ್ಲಿ 5 ಜನರು ದಲಿತರಿದ್ದಾರೆ. ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳಿಗೆ ದಲಿತರು ಪಕ್ಷದ ಪರವಾಗಿ ನಿಲ್ಲಲು ದಲಿತರಾದ ಪರಮೇಶ್ವರ್ಗೆ ಡಿಸಿಎಂ ಸ್ಥಾನ ನೀಡಬೇಕು ಎಂದರು. ಕೇವಲ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಸರ್ಕಾರ ಶಾದಿ ಭಾಗ್ಯ, ರಾಜ್ಯ ವಕ್ಫ್ ಮಂಡಳಿಯ ವ್ಯಾಪ್ತಿಗೆ ಬರುವ ಇಮಾಮ್ ಹಾಗೂ ಮೌಜಾನ್ಗಳಿಗೆ ರು. 3,100 ಮತ್ತು ರು. 2,500 ಗೌರವಧನ ಮಂಜೂರು ಮಾಡಿರುವ ನಿರ್ಧಾರವನ್ನು ಹಿಂದುಳಿದ ವರ್ಗಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ನಿಗಮ ಮಂಡಳಿಗಳಿಗೆ ಹಿಂದುಳಿದ ವರ್ಗದವರನ್ನೇ ನೇಮಕ ಮಾಡಬೇಕುಎಂದು ಒತ್ತಾಯಿಸಿದರು