ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮನೆ ಬಿಡಿ, ಜಿಹಾದ್ ಸೇರಿ

ನಿಮ್ಮ ಐಷಾರಾಮಿ ಕಾರುಗಳು, ಉದ್ಯೋಗ, ಪತ್ನಿ ಎಲ್ಲವನ್ನೂ ಬಿಟ್ಟು ಜಿಹಾದ್‌ಗೆ ಸೇರಿ...

Mainashree
Updated On : 20 Jun 2014, 10:35 am

ಬಾಗ್ದಾದ್: ನಿಮ್ಮ ಐಷಾರಾಮಿ ಕಾರುಗಳು, ಉದ್ಯೋಗ, ಪತ್ನಿ ಎಲ್ಲವನ್ನೂ ಬಿಟ್ಟು ಜಿಹಾದ್‌ಗೆ ಸೇರಿ. ನಾವು ಪಡುತ್ತಿರುವ ಖುಷಿಯನ್ನು ನೀವೂ ಅನುಭವಿಸಿ.
ಇದು ಇರಾಕ್‌ನಲ್ಲಿ ನೆತ್ತರ ಇತಿಹಾಸ ಬರೆಯುತ್ತಿರುವ ಇಸಿಸ್ ಉಗ್ರ ಸಂಘಟನೆ ಮುಸ್ಲಿಂ ಯುವಕರನ್ನು ಜಿಹಾದ್‌ನತ್ತ ಸೆಳೆಯುತ್ತಿರುವ ಪರಿ. ಪಾಶ್ಚಿಮಾತ್ಯ ಯುವಕರನ್ನೂ ತಮ್ಮ ಸಂಘಟನೆಗಳಿಗೆ ಸೇರಿಸಿಕೊಳ್ಳುವ ಉದ್ದೇಶದಿಂದ ಇಂತಹ ಭಾವನಾತ್ಮಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಉಗ್ರರು.
ವಿಡಿಯೋ ಬಿಡುಗಡೆ: ಇರಾಕ್ ಮತ್ತು ಸಿರಿಯಾ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಪಾಶ್ಚಿಮಾತ್ಯರಿಗೆ ಕರೆ ನೀಡುವ 13 ನಿಮಿಷದ ವಿಡಿಯೋವನ್ನು ಉಗ್ರರೇ ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು, ಕುರಾನ್‌ನ ಕೆಲವು ಪ್ಯಾರಾಗಳನ್ನು ಪಠಿಸುತ್ತಿರುವ ಮೂವರು ಬ್ರಿಟಿಷ್ ಜಿಹಾದಿಗಳುಇಂಗ್ಲಿಷ್‌ನಲ್ಲಿಯೇ ಕರೆ ನೀಡುತ್ತಿರುವ ದೃಶ್ಯವಿದೆ.


ಏರುತ್ತಿದೆ ಜಾಗತಿಕ ನಿರಾಶ್ರಿತರ ಸಂಖ್ಯೆ
ಯುದ್ಧ ಹಾಗೂ ಹಿಂಸಾಚಾರದಿಂದಾಗಿ ಜಗತ್ತಿನಾದ್ಯಂತ ಕಳೆದ ವರ್ಷ ನಿರಾಶ್ರಿತರಾದವ ಸಂಖ್ಯೆ ಎಷ್ಟು ಗೊತ್ತೇ? ಬರೋಬ್ಬರಿ 5 ಕೋಟಿ. 2ನೇ ವಿಶ್ವಯುದ್ಧದ ಬಳಿಕ ಈ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿರುವುದು ಇದೇ ಮೊದಲು ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಸಿರಿಯಾ, ಮಧ್ಯ ಆಫ್ರಿಕಾ ಮತ್ತು ದಕ್ಷಿಣ ಸುಡಾನ್‌ನಲ್ಲಿನ ಹಿಂಸಾಚಾರವು ನಿರ್ವಸತಿಗರ ಸಂಖ್ಯೆ ಏರಿಕೆಯಾಗಲು ಪ್ರಮುಖ ಕಾರಣ ಎಂದೂ ವರದಿ ಹೇಳಿದೆ.

    ತೈಲ ಬಿಕ್ಕಟ್ಟು ಉಂಟಾಗದು
ಇರಾಕ್‌ನಲ್ಲಿ ಉಂಟಾಗಿರುವ ಯುದ್ಧ ಸನ್ನಿವೇಶವು ಭಾರತದಲ್ಲಿ ತೈಲ ಬಿಕ್ಕಟ್ಟು ಉಂಟುಮಾಡುವ ಸಾಧ್ಯತೆಯಿಲ್ಲ. ಕದನ ದಕ್ಷಿಣ ಇರಾಕ್‌ಗೆ ಪ್ರವೇಶಿಸಿದಲ್ಲಿ ಎಂಬ ಕಾರಣಕ್ಕೆ ಮುಂಜಾಗ್ರಕತೆ ಅಗತ್ಯ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಜತೆಗೆ, ಸರ್ಕಾರಿ ಸ್ವಾಮ್ಯದ ತೈಲ ಶುದ್ಧೀಕರಣ ಘಟಕಗಳಿಗೆ ಪತ್ರ ಬರೆದಿರುವ ಪೆಟ್ರೋಲಿಯಂ ಸಚಿವಾಲಯ, ಕೂಡಲೇ ಅನಿರೀಕ್ಷಿತ ಸಂದರ್ಭಕ್ಕಾಗಿ ಕೆಲವು ಯೋಜನೆಗಳನ್ನು ಸಿದ್ಧಪಡಿಸಿಡುವಂತೆ ಸೂಚಿಸಿದೆ.

ಒಬ್ಬ ಪರಾರಿ; 16 ಮಂದಿ ಸ್ವದೇಶಕ್ಕೆ

ಇರಾಕ್‌ನಲ್ಲಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ. ಅಪಹರಣಕ್ಕೆ ಒಳಗಾಗಿರುವ 40 ಮಂದಿ ಪೈಕಿ ಒಬ್ಬ ತಪ್ಪಿಸಿಕೊಂಡಿದ್ದಾನೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಆತ ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಜತೆ ಸಂಪರ್ಕದಲ್ಲಿದ್ದಾರೆ. ಬಾಗ್ದಾದ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ 16 ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರರು ಸಭೆ ಸೇರಿ ಪರಿಸ್ಥಿತಿ ಪರಾಮರ್ಶೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement