ಹುಲಕೋಟಿ ಅಪಘಾತ: ಮೃತರ ಸಂಖ್ಯೆ 18ಕ್ಕೇರಿಕೆ
ಹುಬ್ಬಳ್ಳಿ: ಗದಗ ತಾಲೂಕು ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರ ಬಳಿ ಗುರುವಾರ ರಾತ್ರಿ ಟ್ರ್ಯಾಕ್ಟರ್-ಟಿಪ್ಪರ್ ಡಿಕ್ಕಿ ಪರಿಣಾಮ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಶುಕ್ರವಾರ ಬೆಳಗ್ಗೆ ಅಸುನೀಗಿದ್ದು, ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇರಿದೆ.
ಯಲಬುರ್ಗಾ ತಾಲೂಕಿನ ಬಿನ್ನ್ನಾಳದ ಸಾವಿತ್ರಿ ಶರಣಪ್ಪ ಬಾರಕೇರ (30), ಸಿದ್ನೆಕೊಪ್ಪದ ಸೀತವ್ವ ಶಂಕ್ರಪ್ಪ (65), ಕಳಕಪ್ಪ ಮನಗೂಳಿ (25), ಸುಮಿತ್ರಾ ಶರಣಪ್ಪ ಹೈದ್ರಿ (35) ಶುಕ್ರವಾರ ಮೃತಪಟ್ಟಿದ್ದಾರೆ.
ಸಿದ್ನೆಕೊಪ್ಪದ ಭೀಮವ್ವ (9), ಸುಮಿತ್ರಾ (45) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.