ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಾಸ್‌ಪೋರ್ಟ್ ಮೇಲೆ ಮಗ ಚಿತ್ರ ಬರೆದ!

Vishwanath S
Updated On : 22 Jun 2014, 1:13 am

ಅವನು ನತದೃಷ್ಟ ಚೀನೀ ಮನುಷ್ಯ. ಮಗನೊಂದಿಗೆ ಟೂರಿಗೆಂದು ದಕ್ಷಿಣಾ ಕೊರಿಯಾಕ್ಕೆ ಹೋಗಿದ್ದ. ಜಾಲಿಟ್ರಿಪ್ಪಿಗೆಂದು 15 ದಿನಕ್ಕೆ ಹೋಗಿದ್ದವ ಇನ್ನೂ ಅಲ್ಲೇ ಇದ್ದಾನೆ. ಹಾಗೆ ಇರುತ್ತ ಎರಡು ತಿಂಗಳಾಗಿದೆ. ಆದರೆ, ಆತ ಜಾಲಿ ಆಗಿಲ್ಲ! ಕಸ್ಟಮ್ ಅಧಿಕಾರಿಗಳ ಕೈಯಲ್ಲಿ ಅವನು- ಮಗ ಇಬ್ಬರೂ ಬಂಧಿ. ಅಷ್ಟಕ್ಕೂ ಆತನೇನು ಅಕ್ಷಮ್ಯ ಅಪರಾಧ ಎಸಗಿಲ್ಲ. ದುರಂತ ನೋಡಿ, ಆತನ ಪಾಸ್‌ಪೋರ್ಟಿನ ಮೇಲೆ ಮಗ ಯದ್ವಾತದ್ವಾ ಡೂಡಲ್ಸ್ (ರೇಖಾಚಿತ್ರ) ಬಿಡಿಸಿ ಅಪ್ಪನನ್ನು ಇಂಥ ಇಕ್ಕಟ್ಟಿಗೆ ಸಿಲುಕಿಸಿದ್ದಾನೆ. ಆ ಚಿತ್ರದಲ್ಲಿ ಪ್ರಾಣಿಗಳಿವೆ, ಮೋಡಗಳಿವೆ, ಗಿಡಗಳಿವೆ. ಮಗನ ಈ ಪರಮಾದ್ಭುತ ಕಲೆಯನ್ನು ಹೊಗಳಿದ ಕಸ್ಟಮ್ ಅಧಿಕಾರಿ, ಆತನಿಗೊಂದು ಡ್ರಾಯಿಂಗ್ ಬುಕ್ಕನ್ನು ಗಿಫ್ಟಾಗಿ ಕೊಟ್ಟಿದ್ದಾನಂತೆ. ಆದರೆ, ಅಪ್ಪನಿಗೆ ಬದಲಿ ಪಾಸ್‌ಪೋರ್ಟ್ ತೋರಿಸದೆ ಬಿಡುವುದಿಲ್ಲವೆಂದು ಗುಟುರು ಹಾಕಿದ್ದಾನೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement