ಪೂನಾಂ ಪಾಂಡೆಯ ಭವಿಷ್ಯದ 5 ಭರವಸೆಗಳು!
ಭಾರತದಲ್ಲಿ ಅಥವಾ ವಿಶ್ವದಲ್ಲಿ ಏನೇ...
ಭಾರತದಲ್ಲಿ ಅಥವಾ ವಿಶ್ವದಲ್ಲಿ ಏನೇ ಮಹತ್ವದ ಸಂಗತಿ ಘಟಿಸಿದಾಗಲೂ ಪೂನಂ ಮೂಗೊಂದೇ ಅಲ್ಲ ಎಲ್ಲವನ್ನೂ ತೂರಿಸುತ್ತಾಳೆ. ಈ ಹಿಂದೆ ಕ್ರಿಕೆಟ್ ವರ್ಲ್ಡ್‌ಕಪ್, ಚುನಾವಣೆ, ಬಿಗ್‌ಬಾಸ್, ಐಪಿಎಲ್ ನಡೆದಾಗ ಅವಳ ಬಾಯಿಗೆ ತುರಿಕೆ ಬಂದಿದ್ದು ಗೊತ್ತೇ ಇದೆ. ಏನೇನೋ ಮಾದಕ ಭರವಸೆಗಳನ್ನು ನೀಡುತ್ತಾ ಎಲ್ಲರನ್ನೂ ನಿರಾಶೆ ಮಾಡುತ್ತಲೇ ಇರುತ್ತಾಳೆ. ಆದರೆ, ಈ ಪರಂಪರೆಯನ್ನು ಆಕೆ ಇಲ್ಲಿಗೆ ನಿಲ್ಲಿಸುವುದಿಲ್ಲವಂತೆ. ಪೂನಂ ನೀಡಬಹುದಾದ 5 ಭರವಸೆಗಳನ್ನು ನಾವಿಲ್ಲಿ ಮುಂಚಿತವಾಗಿಯೇ ಪ್ರಕಟಿಸುತ್ತಿದ್ದೇವೆ...
ಫಿಫಾ ವರ್ಲ್ಡ್‌ಕಪ್- 2014
"ಈ ಬಾರಿ ಬ್ರೆಜಿಲ್ ಗೆದ್ರೆ ನಾನೇನ್ ಮಾಡ್ತೀನೋ ಗೊತ್ತಿಲ್ಲ. ನೇಮಾರ್ ಬ್ರಹ್ಮಚಾರಿಯಾಗಿರಲು ನಾನ್ ಬಿಡೋಳಲ್ಲ್ಲ".
ಕೇಂದ್ರ ಬಜೆಟ್- 2014
"ಜವಳಿ ಮೇಲೆ ಕೇಂದ್ರ ಸರ್ಕಾರ ಈ ಥರ ಟ್ಯಾಕ್ಸ್ ಹಾಕುತ್ತಲೇ ಇದ್ದರೆ, ತುಂಡುಡುಗೆ ಖರೀದಿಸುವುದನ್ನು ನಿಲ್ಲಿಸುತ್ತೇನೆ ಮತ್ತು ನಾನು ಬಟ್ಟೆ ಧರಿಸುವ ಬಗ್ಗೆಯೂ ಯೋಚಿಸಬೇಕಾಗುತ್ತೆ".
ಇಸ್ರೋ ಚಂದ್ರಯಾನ- 2016
"ಇಸ್ರೋ ಕಳುಹಿಸಿದ ನೌಕೆ ಚಂದ್ರನನ್ನು ತಲುಪದಿದ್ದರೆ, ನಾನೇ ರಾಕೆಟ್‌ನಲ್ಲಿ ಕುಳಿತು ಹನಿಮೂನ್‌ಗೆ ಹೋಗ್ತೀನಿ".
ಕ್ರಿಕೆಟ್ ವರ್ಲ್ಡ್‌ಕಪ್- 2015
"ಆಸ್ಟ್ರೇಲಿಯಾ ನೆಲದಲ್ಲಿ ಧೋನಿ ಹುಡುಗರು ಸರಿಯಾಗಿ ಆಡ್ಲಿಲ್ಲ. ಸದ್ಯದಲ್ಲೇ ನಾನು ಟೀಂ ಇಂಡಿಯಾಕ್ಕೆ ಕೋಚ್ ಆಗೋಣ ಅಂತಿದ್ದೀನಿ. ಬ್ಯಾಚುಲರ್‌ಗಳಿಗಷ್ಟೇ ಟೀಮ್‌ನಲ್ಲಿ ಚಾನ್ಸು. ಆದ್ರೆ ಒಂದು... ನೈಟ್‌ಒನ್‌ಡೇ ಮ್ಯಾಚ್ ವೇಳೆ ನಾನು ಬಿಡುವಿರುವುದಿಲ್ಲ".
2019- ಎಲೆಕ್ಷನ್
"ಈ ಬಾರಿ ನಾನೇ ಪಕ್ಷ ಕಟ್ತಿದ್ದೀನಿ. ಒಣಮೆಣಸಿನ ಕಾಯಿ ಚಿಹ್ನೆ.