ಅನಂತಮೂರ್ತಿ, ಕಲ್ಬುರ್ಗಿ ಮನುಷ್ಯರೋ, ದನಗಳೋ?
ದೇವರ ಕಲ್ಲಿನ ಮೇಲೆ ಮೂತ್ರ ಮಾಡುವುದರಲ್ಲಿ ಏನು ತಪ್ಪಿದೆ ಎನ್ನುವ ಡಾ. ಅನಂತಮೂರ್ತಿ...
ಶಿವಮೊಗ್ಗ: ದೇವರ ಕಲ್ಲಿನ ಮೇಲೆ ಮೂತ್ರ ಮಾಡುವುದರಲ್ಲಿ ಏನು ತಪ್ಪಿದೆ ಎನ್ನುವ ಡಾ. ಅನಂತಮೂರ್ತಿ ಮತ್ತು ಕಲ್ಬುರ್ಗಿ ಮನುಷ್ಯರೋ, ದನಗಳೋ ಎಂಬುದು ನನಗಂತೂ ಅರ್ಥವಾಗುತ್ತಿಲ್ಲ?
ಹೀಗೆಂದು ಹಿರಿಯ ಸಾಹಿತಿಗಳ ಕುರಿತು ಕಿಡಿಕಾರಿದವರು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ.
ಅನಂತಮೂರ್ತಿ, ಕಲ್ಬುರ್ಗಿಯವರು ಕ್ರಿಶ್ಚಿಯನ್ ಅಥವಾ ಮುಸ್ಲಿಂ ಧರ್ಮದ ನಂಬಿಕೆ ಮೇಲೆ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ್ದರೆ ಜೀವಂತ ಸುಟ್ಟುಬಿಡುತ್ತಿದ್ದರು. ಹಿಂದೂಗಳ ನೆಮ್ಮದಿ ಕದಡುವ ಪ್ರಯತ್ನ ಮಾಡಬೇಡಿ. ಇದರ ಪರಿಣಾಮ ಗಂಭೀರವಾದೀತು ಎಂದೂ ಎಚ್ಚರಿಸಿದ್ದಾರೆ ಈಶ್ವರಪ್ಪ.
ಇಲ್ಲಿನ ಪಂಚಾಚಾರ್ಯ ಐಟಿಐ ಕಾಲೇಜಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಧರ್ಮದಲ್ಲಿ ನಂಬಿಕೆಗೆ ಹೆಚ್ಚಿನ ಮಹತ್ವ ಇದೆ. ಕೆಲವರು ಜನರ ನಂಬಿಕೆಗಳ ಕುರಿತು ಹಗುರವಾಗಿ ಮಾತನಾಡಿದರೆ ಟಿವಿ, ಪತ್ರಿಕೆಯಲ್ಲಿ ಪ್ರಚಾರ ಸಿಗುತ್ತದೆ ಎಂದುಕೊಂಡಿದ್ದಾರೆ ಎಂದರು.