ಕುಣಿಗಲ್ ಗಿರಿ ಸಹಚರ
ಬಂಧಿತ ಆರೋಪಿ ಚೌಡ್ಲು ಗ್ರಾಮದ ಶರತ್ ಕುಮಾರ್ ಬೆಂಗಳೂರಿನ ಕುಖ್ಯಾತ ಭೂಗತ ಪಾತಕಿ ಕುಣಿಗಲ್ ಗಿರಿಯ ಸಹಚರ. ಕೆಲ ವರ್ಷಗಳಿಂದ ಶರತ್ ಪ್ರತ್ಯೇಕವಾಗಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೆಲ ವಾರಗಳ ಹಿಂದಷ್ಟೇ ಕುಣಿಗಲ್ ಗಿರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಅವನೊಂದಿಗೆ ಇದ್ದಾಗ ಶರತ್ ಕೂಡ ಹಲವು ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಎಂದು ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ಸತೀಶ್ ಕುಮಾರ್ ತಿಳಿಸಿದ್ದಾರೆ.