ಉಭಯ ಸದನಗಳಿಗೆ ಹೈಟೆಕ್ ಸ್ಪರ್ಶ
ವಿಧಾನಸಭೆ ಹಾಗೂ ವಿಧಾನ ಪರಿಷತ್ಗಳು ಸಂಪೂರ್ಣ ಹೈಟೆಕ್ ಸ್ಪರ್ಶ ಪಡೆದಿವೆ. ಸ್ವಯಂಚಾಲಿತ ಕ್ಯಾಮರಾ, ಸಿಸಿಟಿವಿ, ಮೈಕ್ ಹಾಗೂ ಎಲ್ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಸದನದಲ್ಲಿ ತಲಾ 4 ಸ್ವಯಂಚಾಲಿತ ಕ್ಯಾಮರಾ ಹಾಗೂ ಟಿವಿಗಳನ್ನು ಅಳವಡಿಸಲಾಗಿದೆ. ಎರಡೂ ಸದನಗಳ ಮತ್ತೊಂದು ವಿಶೇಷವೆಂದರೆ ಸದಸ್ಯರು ಮೈಕ್ ಆನ್ ಮಾಡಿದ ತಕ್ಷಣ ಸ್ವಯಂಚಾಲಿತ ಕ್ಯಾಮರಾ ಆ ಸದಸ್ಯರ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸುತ್ತದೆ. ಆ ದೃಶ್ಯ ಸದನದಲ್ಲಿರುವ ಎಲ್ಲ ಟಿವಿಗಳಲ್ಲಿ ಬರುತ್ತದೆ. ಪರಿಷತ್ನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸದನವನ್ನೇ ಸಂಪೂರ್ಣವಾಗಿ ನವೀಕರಿಸಲಾಗಿದೆ.