ಎರಡನೇ ಹಂತದ ಕೌನ್ಸೆಲಿಂಗ್ಗೆ ಹೆಚ್ಚುವರಿ 150 ವೈದ್ಯ ಸೀಟು
ವಿಧಾನ ಪರಿಷತ್: ವೃತ್ತಿ ಶಿಕ್ಷಣ ಕೋರ್ಸ್ಗಳ ಎರಡನೇ ಹಂತದ ಕೌನ್ಸೆಲಿಂಗ್ಗೆ ಹೆಚ್ಚುವರಿಯಾಗಿ 150 ವೈದ್ಯ ಸೀಟುಗಳು ಸೇರುತ್ತವೆ ಎಂದು ವೈದ್ಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ಭಾರತೀಯ ವೈದ್ಯ ಪರಿಷತ್ನ ಪರಿಶೀಲನೆ ಬಳಿಕ ಬೆಂಗಳೂರು ಹಾಗೂ ಹುಬ್ಬಳ್ಳಿಯ ಸರ್ಕಾರಿ ವೈದ್ಯ ಕಾಲೇಜುಗಳ 150 ಸೀಟುಗಳನ್ನು ರದ್ದು ಮಾಡಲಾಗಿತ್ತು. ಇದಲ್ಲದೇ ಬಳ್ಳಾರಿ ಹಾಗೂ ಮೈಸೂರಿನ ತಲಾ 50 ಸೀಟುಗಳು ಕೂಡ ರದ್ದಾಗಿವೆ. ಆದರೆ ಬಿಎಂಸಿ ಮತ್ತು ಕಿಮ್ಸ್ನ 150 ಸೀಟುಗಳನ್ನು ಮತ್ತೆ ನೀಡಲು ಎಂಸಿಐ ಒಪ್ಪಿಗೆ ಸೂಚಿಸಿದೆ. ಎರಡನೇ ಹಂತದ ಕೌನ್ಸೆಲಿಂಗ್ನ ಸೀಟು ಹಂಚಿಕೆಗೆ ಸೇರಿಸಲಾಗುವುದು ಎಂದು ಜೆಡಿಎಸ್ನ ಮರಿತಿಬ್ಬೇಗೌಡ ಪ್ರಶ್ನೆಗೆ ಪಾಟೀಲ್ ವಿಧಾನಪರಿಷತ್ನಲ್ಲಿ ಉತ್ತರಿಸಿದರು.