ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೇಲಧಿಕಾರಿಗಳ ಕಿರುಕುಳ ನಿಯಂತ್ರಣಕ್ಕೆ ವಿಫಲ

Mainashree
Updated On : 23 Jun 2014, 10:17 am

ಕೆಎಸ್‌ಆರ್‌ಟಿಸಿ ಹಾಗೂ ಇತರೆ ರಸ್ತೆ ಸಾರಿಗೆ ನಿಗಮಗಳಲ್ಲಿ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ 'ಕನ್ನಡಪ್ರಭ'ವು ಸರಣಿ ಲೇಖನ ಪ್ರಕಟಿಸಿತ್ತು. ಆದಾಗ್ಯೂ ಇಲಾಖೆ ಎಚ್ಚೆತ್ತಿಲ್ಲ ಎಂದು ಬಿಜೆಪಿಯ ಅಶ್ವತ್ಥನಾರಾಯಣ ಆರೋಪಿಸಿದರು. ಇತ್ತೀಚೆಗೆ ಗುಲ್ಬರ್ಗದ ಆಳಂದದಲ್ಲಿ ಈಶಾನ್ಯ ಸಾರಿಗೆಯ ಬಸ್ ಅಪಘಾತವಾಗಿ 17 ಜನರು ಮೃತಪಟ್ಟಿದ್ದರು. ಆ ಬಸ್‌ನ ಚಾಲಕನಿಗೆ ನಿರಂತರವಾಗಿ 3 ಪಾಳಿಯಲ್ಲಿ ಕೆಲಸ ನೀಡಲಾಗಿತ್ತು. ಇದರಿಂದ ಆತನಿಗೆ ನಿದ್ರೆ ತಡೆಯಲಾರದೇ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದ ಎಂದು ಅವರು ವಿಧಾನಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಚಾಲಕನಿಗೆ ಹೆಚ್ಚುವರಿ ಪಾಳಿ ಮೇಲೆ ಕೆಲಸ ಮಾಡಿಸಲಾಗಿರುವ ಆರೋಪ ಸುಳ್ಳು. ಖಾಸಗಿ ವಾಹನದ ಚಾಲಕನ ನಿರ್ಲಕ್ಷ್ಯದಿಂದ ಅಪಘಾತವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement