ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಪಘಾತ: ಮಾಜಿ ಶಾಸಕನ ಪುತ್ರ ಸೇರಿ ಇಬ್ಬರ ಸಾವು

Mainashree
Updated On : 24 Jun 2014, 9:43 am

ಜಮಖಂಡಿ: ಸೇತುವೆಗೆ ಕಾರು ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಮಾಜಿ ಶಾಸಕ ರಾಮಣ್ಣ ಕಲೂತಿ ಪುತ್ರ ಸೇರಿ ಇಬ್ಬರು ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ಮುಧೋಳ ರಸ್ತೆಯಲ್ಲಿ ನಡೆದಿದೆ.
ಡಿಪ್ಲೋಮಾ ಎಂಜಿನಿಯರ್ ಸುಭಾಸ್ ಮಲ್ಲಪ್ಪ ಮೈಗೂರು (47) ಸ್ಥಳದಲ್ಲೇ ಮೃತಪಟ್ಟರೆ, ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ರಾಮಣ್ಣಾ ಕಲೂತಿ ಪುತ್ರ, ಅರ್ಬನ್ ಬ್ಯಾಂಕ್ ನಿರ್ದೇಶಕ ಸೂರ್ಯಕಾಂತ ಕಲೂತಿ (54) ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಾಂಬ್ರಾ ಬಳಿ ಮೃತಪಟ್ಟಿದ್ದಾರೆ. ವೇಗದಲ್ಲಿ ಸಾಗುತ್ತಿದ್ದ ಕಾರಿಗೆ ಎದುರಿನಿಂದ ಬಂದ ವಾಹನದ ಪ್ರಖರ ಬೆಳಕು ಅಡ್ಡಿಯಾಗಿ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳಕ್ಕೆ ಬಿದ್ದಿದೆ.  ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement