ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಲುಬಾಯಿ ರೋಗ: ಆಗಸ್ಟ್‌ನಿಂದ ಲಸಿಕೆ ಆಂದೋಲನ

Mainashree
Updated On : 24 Jun 2014, 9:59 am

ವಿಧಾನಸಭೆ: ರಾಜ್ಯಾದ್ಯಂತ ಕಾಲುಬಾಯಿ ರೋಗದ ನಿಯಂತ್ರಣಕ್ಕಾಗಿ ಜಾನುವಾರುಗಳಿಗೆ ಲಸಿಕೆ ಹಾಕುವ ಈ ವರ್ಷದ ಆಂದೋಲನ ಆಗಸ್ಟ್‌ನಿಂದ ಪ್ರಾರಂಭಿಸಲಾಗುತ್ತದೆ ಎಂದು ಪಶುಸಂಗೋಪನೆ ಖಾತೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಚಲುವರಾಯಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ವರ್ಷ ಆರು ಸುತ್ತಿನಲ್ಲಿ ಲಸಿಕೆ ಹಾಕಲಾಗಿದೆ. ಆರನೇ ಸುತ್ತಿನಲ್ಲಿ ಶೇ.96ರಷ್ಟು ಲಸಿಕೆ ಹಾಕಲಾಗಿದೆ. ಆಗಸ್ಟ್‌ನಿಂದ ಏಳನೇ ಸುತ್ತು ಆರಂಭವಾಗಲಿದ್ದು, ಶೇ.100ರಷ್ಟು ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು. ಲಸಿಕೆ ಹಾಕುವ ಕಾರ್ಯ ಆರಂಭವಾದ ಮೇಲೆ ಯಾವ ಜಾನುವಾರಿಗೂ ಕಾಲುಬಾಯಿ ರೋಗ ವರದಿಯಾಗಿಲ್ಲ. ಲಸಿಕೆ ಹಾಕಲು ಹಣದ ಕೊರತೆ ಇಲ್ಲ. ಕೇಂದ್ರ ಸರ್ಕಾರ 10 ಕೋಟಿ ನೀಡಿದೆ. ಸಿಬ್ಬಂದಿಯ ಕೊರತೆಯೂ ಇಲ್ಲ. ಏಕೆಂದರೆ, 233 ಪಶು ಸಹಾಯಕರನ್ನು ಕೆಲವೇ ದಿನಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. 250 ನಿವೃತ್ತರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement