ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಿರಣ್ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿ ನಾಳೆ ಧರಣಿ

Mainashree
Updated On : 24 Jun 2014, 10:36 am

ತಿಪಟೂರು: ತಾಲೂಕಿನ ಕರಡಾಳು ಸಂತೆ ಆವರಣದಲ್ಲಿ ಕಳೆದ ವಾರದ ಹಿಂದೆ ಪೊಲೀಸರ ಕಾರ್ಯಚರಣೆಯಿಂದ ಮೃತಪಟ್ಟಿರುವ ಯುವ ರೈತ ಕಿರಣ್ ಪ್ರಕರಣವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದನ್ನು ಖಂಡಿಸಿ ತಾಲೂಕಿನ ಕೆಲವು ಸಂಘಟನೆಗಳ ಸಹಕಾರದೊಂದಿಗೆ ರಸ್ತೆ ತಡೆ, ಪ್ರತಿಭಟನೆಯನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಲೋಕೇಶ್ವರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲೋಕೇಶ್ವರ ನೇತೃತ್ವದಲ್ಲಿ ನಾನಾ ಸಂಘಟನೆಗಳು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿರಣ್ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಜೂ.26ರ ಗುರುವಾರದಂದ ಹತ್ಯಾಳು ಗೇಟಟ್ಬಳಿಯ ಎನ್.ಹೆಚ್.206ರಲ್ಲಿ ಬೆಳಿಗ್ಗೆ 10 ಗಂಟೆಗೆ ಧರಣಿ ಮತ್ತು ರಸ್ತೆ ತಡೆ ನಡೆಸಲಾಗುವುದು. ಜೂ.28ರ ಶನಿವಾರ ಹತ್ಯಾಳು ಮೃತ ಕಿರಣ್ ಮನೆಯಿಂದ ಸಾವಿರಾರು ಜನ ಬೈಕ್ ರ್ಯಾಲಿ ಮೂಲಕ ತಿಪಟೂರು ಕೋಡಿ ಸರ್ಕಲ್‌ಗೆ ತೆರಳಿ, ಅಲ್ಲಿಂದ ಬೃಹತ್ ಪ್ರತಿತಿಭಟನಾ ಮೆರವಣಿಗೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿವರೆಗೆ  ತೆರಳಿ ಮುತ್ತಿಗೆ ಹಾಕಲಾಗುವುದು. ಈ ಪ್ರತಿಭಟನೆಗಳಿಗೂ ಸರ್ಕಾರ ಜಗ್ಗದಿದ್ದಲ್ಲಿ ಮುಂದಿನ ವಾರದಲ್ಲಿ ತಿಪಟೂರನ್ನು ಸಂಪೂರ್ಣ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement