ನಾಮನಿರ್ದೇಶನ: ಸಿಎಂ ಶಿಫಾರಸು ಪ್ರಶ್ನಿಸಿ ಪಿಐಎಲ್
ಬೆಂಗಳೂರು: ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಮುಖ್ಯಮಂತ್ರಿಗಳ ಶಿಫಾರಸು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸುವಂತೆ ರಿಜಿಸ್ಟ್ರಾರ್ ಜನರಲ್ಗೆ ಹೈಕೋರ್ಟ್ನ ನ್ಯಾ.ಅಶೋಕ್ ಬಿ. ಹಿಂಚಿಗೇರಿ ನಿರ್ದೇಶಿಸಿದ್ದಾರೆ.
ಸಂವಿಧಾನದ ಕಲಂ 171(5)ರ ಪ್ರಕಾರ ಸಾಹಿತ್ಯ, ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ರಾಜಕೀಯೇತರ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಬಹುದಾಗಿದೆ. ರಾಜ್ಯಪಾಲರಿಗೆ ಸ್ವತಂತ್ರವಾಗಿ ನಾಮನಿರ್ದೇಶನ ಮಾಡುವ ಅಧಿಕಾರವಿದೆ. ಆದರೆ ಮುಖ್ಯಮಂತ್ರಿ ರಾಜಕೀಯ ವ್ಯಕ್ತಿಗಳ ನಾಮನಿರ್ದೇಶನ ಮಾಡುವ ಮೂಲಕ ಸಂವಿಧಾನ ಆಶಯಕ್ಕೆ ಧಕ್ಕೆ ತರಲಾಗಿದೆ ಎಂದು ಆರ್ಜಿಯಲ್ಲಿ ದೂರಲಾಗಿದೆ.ಈ ಸಂಸ್ಕೃತಿಗೆ ತಡೆ ನೀಡುವ ಮೂಲಕ ಈ ಬಾರಿ ಪರಿಷತ್ ಸ್ಥಾನಕ್ಕೆ ಸಿಎಂ ಸೂಚಿಸುವ ಹೆಸರು ಅಂಗೀಕರಿಸದೆ ರಾಜ್ಯಪಾಲರು ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಮನವಿ ಸಲ್ಲಿಸಿದ್ದರು.