ಮುದ್ರಾಂಕ ಶುಲ್ಕ: ಅಬಕಾರಿ ಆಯುಕ್ತರ ನೋಟಿಸ್ ವಜಾ
ಬೆಂಗಳೂರು: ಮುದ್ರಾಂಕ ಶುಲ್ಕ ಪಾವತಿಸುವಂತೆ ಬಾರ್ ಮಾಲೀಕರಿಗೆ ಅಬಕಾರಿ ಆಯುಕ್ತರು ಹೊರಡಿಸಿದ್ದ ನೋಟಿಸನ್ನು ಹೈಕೋರ್ಟ್ ವಜಾಗೊಳಿಸಿದೆ. ಪರವಾನಗಿ ನವೀಕರಣದ ವೇಳೆ ಮುದ್ರಾಂಕ ಶುಲ್ಕ ನೀಡುವಂತೆ ಬಾರ್ ಮಾಲೀಕರಿಗೆ ರಾಜ್ಯ ಅಬಕಾರಿ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ವೀರಣ್ಣ ಹಾಗೂ ಇತರ ಬಾರ್ ಮಾಲೀಕರು ಹೈಕೋರ್ಟ್ ಮೆಟ್ಟಲೇರಿದ್ದರು.ಕಳೆದ 2004ರಿಂದ ಪರವಾನಗಿ ಅರ್ಜಿ ಹಾಕುವವರೆಗಿನ ಮುದ್ರಾಂಕ ಶುಲ್ಕ ಪಾವತಿಸಬೇಕು ಎಂದು ಮಾರ್ಚ್ 2014ರಲ್ಲಿ ಅಬಕಾರಿ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ನವೀಕರಣ ಹಾಗೂ ತೆರಿಗೆ ಶುಲ್ಕವನ್ನು ಬಾರ್ ಮಾಲೀಕರು ಈಗಾಗಲೇ ನೀಡುತ್ತಿದ್ದು ಮುದ್ರಾಂಕ ಶುಲ್ಕ ತೆರುವುದು ಹೊರೆ ಆಗಲಿದೆ ಎನ್ನುವುದು ಬಾರ್ ಮಾಲೀಕರ ವಾದ.