ಮೇಲ್ಮನೆಯಲ್ಲಿ ಡಿವಿಎಸ್‌ಗೆ ಅಭಿನಂದನೆ
ವಿಧಾನ ಪರಿಷತ್: ರೇಲ್ವೆ ಸಚಿವ ಡಿ.ವಿ.ಸದಾನಂದ ಗೌಡರಿಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಗಣೇಶ್ ಕಾರ್ಣಿಕ್ ಅಭಿನಂದನೆ ಸಲ್ಲಿಸಿದರು. ಪರಿಷತ್ ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿಯಾಗಿ ಸದಾನಂದ ಗೌಡರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯಕ್ಕೆ ಬಹಳಷ್ಟು ನಿರೀಕ್ಷೆಯಿರುವ ರೇಲ್ವೆ ಇಲಾಖೆ ಜವಾಬ್ದಾರಿಯು ಗೌಡರ ಹೆಗಲಿಗೆ ಬಿದ್ದಿದೆ. ಅವರು ಕೇಂದ್ರ ಸಚಿವರಾಗಿರುವುದು ಈ ಸದನಕ್ಕೆ ಸಂದ ಗೌರವವಾಗಿದೆ ಎಂದು ಅವರು ನಿಯಮ 32ಎ ಪ್ರಕಾರ ಅಭಿನಂದನಾ ಪ್ರಸ್ತಾಪ ಸಲ್ಲಿಸಿದರು. ಇದಕ್ಕೆ ಧ್ವನಿಗೂಡಿಸಿದ ಇತರ ಸದಸ್ಯರು ಸದಾನಂದ ಗೌಡರ ಜತೆ ಕೇಂದ್ರ ಸಚಿವರಾದ ಅನಂತ್‌ಕುಮಾರ್, ವೆಂಕಯ್ಯ ನಾಯ್ಡು, ಸಿದ್ದೇಶ್ವರ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅಭಿನಂದನೆ ಸಲ್ಲಿಸಿದರು.