ರೇಲ್ವೆ ದರ ಏರಿಕೆಯಲ್ಲಿಭಾಗಶಃ ಬದಲಾವಣೆ
ನವದೆಹಲಿ: ರೇಲ್ವೆ ದರ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ತನ್ನ ಹಾಗೂ ಮಿತ್ರಪಕ್ಷಗಳ ಸಂಸದರಿಂದಲೇ ಒತ್ತಡ ಎದುರಿಸಿದ ಕೇಂದ್ರ ಸರ್ಕಾರ ಭಾಗಶಃ ಮಣಿದಿದ್ದು ದರ ಏರಿಕೆಯಲ್ಲಿ ಅಲ್ಪ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಬುಧವಾರದಿಂದ ಜಾರಿಗೆ ಬರಲಿದೆ. ಹೊಸ ಆದೇಶದ ಪ್ರಕಾರ, 80 ಕಿ.ಮೀ.ವರೆಗಿನ ದರದಲ್ಲಿ ಏರಿಕೆ ಇಲ್ಲ. ಅಲ್ಲದೇ, ಉಪನಗರ ವ್ಯಾಪ್ತಿಯ 2ನೇ ದರ್ಜೆ ಪ್ರಯಾಣ ದರಗಳಲ್ಲಿ ಯಾವುದೇ ಏರಿಕೆ ಇರುವುದಿಲ್ಲ. ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ರೇಲ್ವೆ ದರ ಏರಿಕೆ ಬಿಸಿ ಎನ್ಡಿಎ ಮೈತ್ರಿಕೂಟಕ್ಕೆ ತಟ್ಟಲಿದೆ ಎಂಬ ಆತಂಕವನ್ನು ಬಿಜೆಪಿ ಸಂಸದರು ವ್ಯಕ್ತಪಡಿಸಿದ್ದರು.