ವ್ಯಾಪಾರ ಪರವಾನಗಿ ಶುಲ್ಕ ರದ್ದು
ವಿಧಾನ ಪರಿಷತ್: ಕೈಗಾರಿಕೆ ಘಟಕಗಳನ್ನು ನೂತನ ಕೈಗಾರಿಕೆ ನೀತಿಯ ವ್ಯಾಪ್ತಿಗೆ ತಂದು ವ್ಯಾಪಾರ ಪರವಾನಗಿ ಶುಲ್ಕ ರದ್ದು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ನಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಕೈಗಾರಿಕೆ ಸಂಸ್ಥೆಗಳ ಆಸ್ತಿ ತೆರಿಗೆ ರದ್ದು ಮಾಡಲು ಸಾಧ್ಯವಿಲ್ಲ. ಆದರೆ ವ್ಯಾಪಾರ ಪರವಾನಗಿ ಕಾಯಿದೆ ವ್ಯಾಪ್ತಿಯಿಂದ ಕೈಗಾರಿಕೆಗಳನ್ನು ಹೊರಗಿಡಲು ಚಿಂತನೆ ನಡೆದಿದೆ. 2014-19ರ ಕೈಗಾರಿಕೆ ನೀತಿಯಲ್ಲಿ ಇದನ್ನು ಸ್ಪಷ್ಟಪಡಿಸುತ್ತೇವೆ ಎಂದು ಅವರು ರಾಮಚಂದ್ರಗೌಡರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.