ಶವಾಗಾರದಲ್ಲಿಟ್ಟಿದ್ದ ಮಗು ಹೆಗ್ಗಣ ಪಾಲು
ಖಾಸಗಿ ನರ್ಸಿಂಗ್ ಹೋಂನ ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದ ಎರಡು...
ಹಾಸನ: ಖಾಸಗಿ ನರ್ಸಿಂಗ್ ಹೋಂನ ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದ ಎರಡು ತಿಂಗಳ ಮಗುವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದಾಗ ಇಲಿ, ಹೆಗ್ಗಣ ತಿಂದ ಘಟನೆ ಹಾಸನದಲ್ಲಿ ಮಂಗಳವಾರ ನಡೆದಿದೆ. ಅರಸೀಕೆರೆ ತಾಲೂಕು ಗಂಡಸಿ ಹ್ಯಾಂಡ್‌ಪೋಸ್ಟ್ ಗ್ರಾಮದ ಯೋಗವ್ಮು ಮತ್ತು ಜಗದೀಶ್‌ರ ಎರಡು ತಿಂಗಳ ಮಗುವನ್ನು ನಗರದ ರಾಜೀವ್ ಆಸ್ಪತ್ರೆಗೆ ಸೋಮವಾರ ಸೇರಿಸಲಾಗಿತ್ತು.
ಆದರೆ, ಅಲ್ಲಿ ಮಗು ಮೃತಪಟ್ಟಿತ್ತು. ನರ್ಸ್ ನೀಡಿದ್ದ ಚುಚ್ಚುಮದ್ದು ಸೂಜಿ ದೇಹದಲ್ಲೇ ತುಂಡಾಗಿದ್ದರಿಂದ ಕೆಲ ಕ್ಷಣದಲ್ಲೇ ಮಗು ಅಸುನೀಗಿದೆ ಎಂದು ಮಗುವಿನ ಸಂಬಂಧಿಕರು ದೂರಿದ್ದರು. ಈ ಹಿನ್ನೆಲೆಯಲ್ಲಿ ಮಗುವಿನ ಶವವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು, ಶವಗಾರದಲ್ಲಿ ಇಡಲಾಗಿತ್ತು. ಆದರೆ ಅಲ್ಲಿ ಮಗುವಿನ ಮುಖವನ್ನು ಇಲಿ, ಹೆಗ್ಗಣಗಳು ತಿಂದು ಹಾಕಿವೆ.
ಪ್ರತಿಭಟನೆ: ಮಗುವಿನ ಶವದೊಂದಿಗೆ ಪೋಷಕರು ಹಾಗೂ ಸಂಬಂಧಿಕರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.