ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸೆಪ್ಟೆಂಬರ್‌ನಲ್ಲಿ ಐರೋಪ್ಯ ಒಕ್ಕೂಟಗಳ ಸಮಿತಿ ರಾಜ್ಯಕ್ಕೆ

Mainashree
Updated On : 24 Jun 2014, 9:59 am

ವಿಧಾನ ಪರಿಷತ್: ರಾಜ್ಯದ ತೋಟಗಾರಿಕೆ ಉತ್ಪನ್ನಗಳ ಮೇಲಿನ ನಿಷೇಧ ಕುರಿತಂತೆ ಮರುಪರಿಶೀಲನೆಗೆ ಸೆಪ್ಟೆಂಬರ್‌ನಲ್ಲಿ ಐರೋಪ್ಯ ಒಕ್ಕೂಟಗಳ ಸಮಿತಿ ರಾಜ್ಯಕ್ಕೆ ಆಗಮಿಸಲಿದೆ ಎಂದು ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಮಾವಿನಹಣ್ಣು, ವೀಳ್ಯದೆಲೆ, ಕೆಸುವಿನ ಗಡ್ಡೆ, ಹಾಗಲಕಾಯಿ, ಪಡುವಲಕಾಯಿ ಮೇಲೆ ಯುರೋಪ್ ದೇಶಗಳು ನಿಷೇಧ ಹೇರಿರುವುದು ನಿಜ. ಆದರೆ ಮರು ಪರಿಶೀಲನೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೆ.2ರಿಂದ 12ರವರೆಗೆ ಈ ಉತ್ಪನ್ನಗಳ ಪರಿಶೀಲನೆ ಮಾಡಲಿದೆ. ಆ ಬಳಿಕ ನಿಷೇಧ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಈ ನಿಷೇಧದಿಂದ ರಾಜ್ಯದ ಒಟ್ಟಾರೆ ರಫ್ತಿನ ಪ್ರಮಾಣದಲ್ಲಿ ಶೇ.1ರಷ್ಟು ಮಾತ್ರ ಇಳಿಕೆಯಾಗುತ್ತಿದೆ. ರಾಜ್ಯದಿಂದ ವಾರ್ಷಿಕವಾಗಿ 6600 ಕೋಟಿ ಮೊತ್ತದ ತೋಟಗಾರಿಕೆ ಬೆಳೆ ರಫ್ತಾಗುತ್ತಿದೆ. ಇದರಲ್ಲಿ ಅರ್ಧ ಭಾಗವನ್ನು ಕಾಫಿ ಆವರಿಸಿಕೊಂಡಿದೆ ಎಂದು ಅವರು ಬಿಜೆಪಿಯ ರಾಮಚಂದ್ರಗೌಡ ಪ್ರಶ್ನೆಗೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement