ಟ್ವೀಟ್‌ನಲ್ಲಿ ವೈಟ್‌ಹೌಸ್ ಹಿಂದಿಕ್ಕಿದ ಟೀ ವಾಲ
ಹಲವು ದಾಖಲೆಗಳನ್ನು ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮೈಲುಗಲ್ಲು..
ಜಿನೇವಾ/ನವದೆಹಲಿ: ಹಲವು ದಾಖಲೆಗಳನ್ನು ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ವಿಶ್ವದಲ್ಲೇ ನಾಲ್ಕನೇ ಅತ್ಯಂತ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಟ್ವಿಟರ್ ಖಾತೆ ಹೊಂದಿರುವುದಕ್ಕಿಂತ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ವಿಶ್ವನಾಯಕರ ಟ್ವಿಟರ್ ಬಳಕೆ ಬಗೆಗಿನ ಬರ್ಸನ್-ಮಾರ್ಸ್‌ಟೆಲರ್ ಸಂಸ್ಥೆ 'ಟ್ವಿಪ್ಲೊಮೆಸಿ' (Twiplomacy) ಅಧ್ಯಯನದಲ್ಲಿ ಈ ಅಂಶ ಗೊತ್ತಾಗಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಶೇ.83ರಷ್ಟು ಟ್ವಿಟರ್‌ನಲ್ಲಿ ಖಾತೆಗಳನ್ನು ಹೊಂದಿವೆ.
ವಿಶ್ವದ ಮೂರನೇ ಎರಡರಷ್ಟು ಸರ್ಕಾರಿ ನಾಯಕರು ಅಧಿಕೃತ ಮತ್ತು ವೈಯಕ್ತಿಕ ಟ್ವಿಟರ್ ಖಾತೆಗಳನ್ನು ಹೊಂದಿದ್ದಾರೆ. ಈ ಸಂಸ್ಥೆ ವಿಶ್ವದ 161 ದೇಶಗಳ 643 ಸರ್ಕಾರಿ ಸಂಸ್ಥೆಗಳು ಹೊಂದಿರುವ ಟ್ವಿಟರ್ ಖಾತೆಗಳನ್ನು ಸಂಸ್ಥೆ ಅಧ್ಯಯನ ಮಾಡಿದೆ.
ಆಫ್ರಿಕ ಮತ್ತು ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ದೇಶಗಳ ಸರ್ಕಾರಗಳು ಟ್ವಿಟರ್ ಖಾತೆ ಹೊಂದಿಯೇ ಇಲ್ಲ ಎಂಬ ಅಂಶ ಅಧ್ಯಯನದಿಂದ ಗೊತ್ತಾಗಿದೆ.
ಶೇ.28ರಷ್ಟು ಹೆಚ್ಚಳ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಮೈಕ್ರೋಬ್ಲಾಗಿಂಗ್ ತಾಣವನ್ನು ಬಳಕೆ ಮಾಡುವ ಇಲಾಖೆಗಳು ಪ್ರಸಕ್ತ ವರ್ಷ ಶೇ.28ರಷ್ಟು ಹೆಚ್ಚಿವೆ ಎನ್ನುವುದು ಅಧ್ಯಯನದಿಂದ ಗೊತ್ತಾಗಿದೆ.
ಫಾಲೋವರ್ಸ್
1. ಬರಾಕ್ ಒಬಾಮ @BarackObama 4.3 ಕೋಟಿ
2. ಪೋಪ್ ಫ್ರಾನ್ಸಿನ್ @Pontifex 1.4 ಕೋಟಿ
3. ಸುಸಿಲೋ ಬಾಮ್‌ಬಾಂಗ್ @SBYudhoyono 50 ಲಕ್ಷ
4. ನರೇಂದ್ರ ಮೋದಿ @NarendraModi 49, 81,777
5. ಶ್ವೇತ ಭವನ @WhiteHouse 49,80,207
ಸೆನೆಟ್ ಸದಸ್ಯರಾಗಿದ್ದ ಬರಾಕ್ ಒಬಾಮ ಮೊದಲ ಬಾರಿಗೆ ಅಂದರೆ 2007ರ ಮಾರ್ಚ್5ರಂದು ಟ್ವಿಟರ್‌ಗೆ ಸೈನ್ ಇನ್ ಆಗಿದ್ದರು. ಈ ಸಂದರ್ಭದಲ್ಲಿ ಅವರು 8,13,286ನೇ ಯೂಸರ್ ಆಗಿದ್ದರು. ನಂತರ ಮೆಕ್ಸಿಕೋ ಅಧ್ಯಕ್ಷ ಎನ್ರಿಕ್ ಪೆನಾ, ಬೆಲ್ಜಿಯಂ ಪ್ರಧಾನಿ ಎಲಿಯೋ ಡಿ ರುಪೋ, ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಮತ್ತು ಅಮೆರಿಕದ ವಿದೇಶಾಂಗ ಇಲಾಖೆ ಟ್ವಿಟರ್‌ಗೆ ಸೇರ್ಪಗೊಂಡವು.
ಜೂ.25ಕ್ಕೆ ಅನ್ವಯವಾಗುವಂತೆ ವಿಶ್ವದ ನಾಯಕರು ಜಂಟಿಯಾಗಿ ಮಾಡಿದ ಟ್ವೀಟ್‌ಗಳು 19,35,308. ಅಂದರೆ ಪ್ರತಿದಿನ ಸರಾಸರಿ 4. ವೆನಿಜೂವೆಲಾದ ಅಧ್ಯಕ್ಷರ ಕಚೇರಿ @PresidencialVen 50 ಸಾವಿರ ಟ್ವೀಟ್‌ಗಳನ್ನು ಕಳುಹಿಸಿತ್ತು. ಅಂದರೆ ಪ್ರತಿದಿನ ಸರಾಸರಿ 40 ಟ್ವೀಟ್.
ಉಗಾಂಡದ ಪ್ರಧಾನಿ @AmamaMbabazi ಜಾಲ ತಾಣದಲ್ಲಿ ಅತ್ಯಂತ ವಿವಾದಾತ್ಮಕ ನಾಯಕ. ಶೇ.95ರಷ್ಟು ಅವರ ಟ್ವೀಟ್‌ಗಳು @replies ಗಳಲ್ಲಿರುತ್ತದೆ.
ಮೆಕ್ಸಿಕೋದ ಅಧ್ಯಕ್ಷರ ಕಚೇರಿ @PresidenciaMX ಅತ್ಯಂತ ಹೆಚ್ಚು ಟ್ವೀಟ್ ಮಾಡುತ್ತಿದೆ. ಅಂದರೆ ಪ್ರತಿ ದಿನ 78 ಟ್ವೀಟ್ ಮಾಡುತ್ತಿದೆ.
ರಿಟ್ವೀಟ್ 10,000 ಪೋಪ್ ಫ್ರಾನ್ಸಿಸ್
ರಿಟ್ವೀಟ್ 2,000 ನಿಕೋಲಸ್ ಮದುರೋ
ರಿಟ್ವೀಟ್ 1,400 ಬರಾಕ್ ಒಬಾಮ