ಶಿರಾಡಿ 9 ಮೀ.ಗೆ ವಿಸ್ತರಣೆ
ವಿಧಾನ ಪರಿಷತ್: ಶಿರಾಡಿ ಘಾಟ್ನ ವಾಹನ ದಟ್ಟಣೆ ಇಳಿಸಲು ಪರ್ಯಾಯ ಮಾರ್ಗಗಳ ಚಿಂತನೆ ನಡೆದಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ತಿಳಿಸಿದ್ದಾರೆ.
ಜೈಕೋ ನೆರವಿನಿಂದ ಸುರಂಗ ಮಾರ್ಗ, ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗ ಕುರಿತು ಚರ್ಚೆ ನಡೆಸಲಾಗುವುದು. ಚಾರ್ಮಾಡಿ ರಸ್ತೆ ವಿಸ್ತರಣೆಗೆ ಟೆಂಡರ್ ಕರೆಯಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಮಚಂದ್ರಗೌಡರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು. ಪ್ರಸ್ತುತ ಶಿರಾಡಿ ರಸ್ತೆ 7 ಮೀ. ಅಗಲವಿದೆ. ಇದನ್ನು 9 ಮೀ.ಗೆ ಏರಿ ಸುವ ಸಂಬಂಧ 69.90 ಕೋಟಿ ಯೋಜನೆ ಅಂತಿಮವಾಗಿದೆ ಎಂದರು.