ಜೀವಿ, ಕೆಎಸ್ಎಲ್ ಸ್ವಾಮಿ, ಭಡ್ತಿ, ಅಶ್ವಿನಿ ಸೇರಿ 136 ಮಂದಿಗೆ ಕೆಂಪೇಗೌಡ ಪ್ರಶಸ್ತಿ
ನಿಘಂಟು ತಜ್ಞ, ಶತಾಯುಷಿ ಜಿ.ಎಸ್. ವೆಂಕಟ ಸುಬ್ಬಯ್ಯ,
ಕನ್ನಡಪ್ರಭ ವಾರ್ತೆ, ಬೆಂಗಳೂರು ಜೂ.26
ನಿಘಂಟು ತಜ್ಞ, ಶತಾಯುಷಿ ಜಿ.ಎಸ್. ವೆಂಕಟ ಸುಬ್ಬಯ್ಯ, ವಿಶ್ವಸಂಸ್ಥೆಯಲ್ಲಿ ಭಾರತ ಕುರಿತಂತೆ ಮಾತನಾಡಿದ ಅಂಧೆ ಕು.ಅಶ್ವಿನಿ, ಇಸ್ರೋ ವಿಜ್ಞಾನಿ ಜಿ.ಎಸ್. ಅಶ್ವಿನಿ, ಕ್ರಿಕೆಟಿಗ ಆರ್. ವಿನಯ್ ಕುಮಾರ್, 'ಕನ್ನಡಪ್ರಭ' ಸಹಾಯಕ ಸಂಪಾದಕ ರಾಧಾಕೃಷ್ಣ ಭಡ್ತಿ ಸೇರಿದಂತೆ 136 ಜನರಿಗೆ ಈ ಬಾರಿಯ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.
ಜೂ.27ರಂದು ಕೆಂಪೇಗೌಡ ದಿನಾಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಗಾಜಿನ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮೇಯರ್ ಸತ್ಯನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಒಟ್ಟು ಪುರಸ್ಕೃತರ ಪೈಕಿ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಈ ಬಾರಿ 24 ಮಹಿಳೆಯರಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪುರಸ್ಕೃತ ಸಂಖ್ಯೆ ಹೆಚ್ಚಿರುವ ಕಾರಣ ಮೊತ್ತವನ್ನು 15 ಸಾವಿರದಿಂದ 12 ಸಾವಿರಕ್ಕೆ ಇಳಿಸಲಾಗಿದೆ. ನಗದು ಬಹುಮಾನದೊಂದಿಗೆ ಪ್ರಮಾಣ ಪತ್ರ ಹಾಗೂ ನೀಡಲಾಗುತ್ತದೆ. ಕೆಂಪೇಗೌಡ ದಿನಾಚರಣೆ, ಬಹುಮಾನ ವಿತರಣೆ ಸೇರಿ ಬಿಬಿಎಂಪಿಗೆ ಸುಮಾರು 1 ಕೋಟಿ ವೆಚ್ಚವಾಗಬಹುದು ಎಂದು ಸತ್ಯನಾರಾಯಣ ಹೇಳಿದರು.
ಶುಕ್ರವಾರ ನಗರದ ನಾಲ್ಕು ದಿಕ್ಕುಗಳ ಗಡಿ ಗೋಪುರಗಳಿಂದ ಬಿಬಿಎಂಪಿ ಕಚೇರಿಗೆ ಮೆರವಣಿಗೆ ಬರಲಿದೆ. ಸಂಜೆ 4 ಗಂಟೆಗೆ ಪಾಲಿಕೆ ಉದ್ಯೋಗಿಗಳಿಗೆ ಸನ್ಮಾನ ಮಾಡಲಾಗುತ್ತದೆ. ಸಂಜೆ 6 ಗಂಟೆಗೆ ಕೆಂಪೇಗೌಡ ಪ್ರಶಸ್ತಿ ವಿತರಿಸಲಾಗುತ್ತದೆ.
ಪಟ್ಟಿ ಇನ್ನಷ್ಟು ಹಿಗ್ಗಬಹುದು: ಕಳೆದ ಬಾರಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 103 ಇದ್ದದ್ದು ಈ ಬಾರಿ 136ಕ್ಕೆ ಏರಿದೆ. ಆದರೆ, ಅಂತಿಮ ಹಂತದವರೆಗೂ ಪುರಸ್ಕೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
2014ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು
ಸಮಾಜ ಸೇವೆ: ಮಹೇಂದ್ರ ಮಾನ್ಯತ್, ಕೆ.ವಿ. ಅಶ್ವತ್ಥನಾರಾಯಣ, ಕೆ.ಎಚ್. ಚನ್ನಪ್ಪ, ಕೆ.ಎಂ. ರಾಮಚಂದ್ರಪ್ಪ, ಡಿ.ಎಸ್. ವೆಂಕಟನಾರಾಯಣ ರಾವ್, ದಿಬ್ಬೂರು ಸಿದ್ದಲಿಂಗಪ್ಪ, ಎಂ.ಎನ್. ಪದ್ಮನಾಭ, ಶಿವಶಂಕರ್, ದಾಮೋದರ್, ಕೆ.ವಿ. ಸತೀಶ್, ರಾಘವೇಂದ್ರ ಶೆಟ್ಟಿ.
ಕ್ರೀಡಾ ಕ್ಷೇತ್ರ: ಆರ್.ವಿನಯ್ಕುಮಾರ್, ವಿ. ನಾಗೇಶ್ವರ ರಾವ್, ಭಾರತಿ ಬಿ.ಎಲ್, ಅಮೂಲ್ಯ ಕಮಲ್, ಎಂ.ಪ್ರಕಾಶ್, ಕೆ.ಎಸ್. ಮಂಜುನಾಥ, ಕೀರ್ತನಾ ಕೆ. ಆಶಿಷ್ ಕುಮಾರ್ ಬಲ್ಲಾಳ್, ಬಿ.ಆರ್. ಸಂಕೀರ್ತ, ಖುಷಿ ದಿನೇಶ್, ಚಿರಂತ್ ಭಾರದ್ವಾಜ್, ಆರ್.ಪ್ರಸಾದ್, ಕೃಷ್ಣ ನಾಯ್ಕೊಡಿ, ಜಿ.ಪದ್ಮಾ, ಪ್ರಿಯಾಂಕ ಎನ್, ಪ್ರೀತಂ ಚೌಗುಲೆ, ವಿ. ತೇಜಸ್ವಿನಿ ಬಾಯಿ, ಆರ್. ರೇಣುಕುಮಾರ್, ಓ. ಸುಶ್ಮಿತಾ ಪವಾರ್, ವರ್ಷಿಣಿ, ಕಬ್ಬಡ್ಡಿ ರಾಮಚಂದ್ರ, ಬಿ. ಆನಂದ ಕುಮಾರ್, ಶ್ವೇತಾ ಎನ್. ಆರ್.ಎಂ. ಶಂಕರ್, ಎ.ಆರ್. ಗೋಪಾಲ್, ಎಸ್.ಐ.ಬಾಬು, ನಂದಿನಿ ಬಸಪ್ಪ, ಬಿ.ಜಿ.ಸಂದೇಶ.
ಶಿಕ್ಷಣ ಕ್ಷೇತ್ರ: ಪ್ರೊ. ಟಿ. ನಾರಾಯಣಪ್ಪ, ಡಾ. ಬಿ.ಜಿ. ಸುಧಾ, ರುಕ್ಮಾಂಗದ ನಾಯ್ಡು, ಚನ್ನೇಗೌಡ, ಮಂಗಳಾ ರಾಮಚಂದ್ರ, ಸುರೇಶ್ ನಾಗಪಾಲ್.
ಸಾಹಿತ್ಯ ಕ್ಷೇತ್ರ: ಜಿ.ಎಸ್.ವೆಂಕಟಸುಬ್ಬಯ್ಯ, ಬಾಗೂರು ಮಾರ್ಕಾಂಡೇಯ, ಜಿ.ಆರ್.ಸುಬ್ರಮಣ್ಯ. ಹೀರಾಬಾಯಿ, ಡಾ. ಹೊಳಲಿ ನಾಗರಾಜು ಶಾಸ್ತ್ರಿ, ಎಂ.ಎಸ್. ಶಶಿಕಲಾ ಗೌಡ, ಕು.ವೆಂ. ರಾಮಕೃಷ್ಣಗೌಡ, ಡಾ. ಜಿ. ಕೃಷ್ಣಪ್ಪ, ಪಿನಾಕ ಪಾಣಿ.
ರಂಗಭೂಮಿ, ಚಲನಚಿತ್ರ, ಕಿರುತೆರೆ ಕಲಾವಿದರು: ಕೆ.ಎಸ್.ಎಲ್. ಸ್ವಾಮಿ, ಸಾಯಿಪ್ರಕಾಶ್, ರಮೇಶ್ ಭಟ್, ಸದಾಶಿವ ಬ್ರಹ್ಮಾವರ್, ಓ.ಎಲ್. ರಾಮಕೃಷ್ಣ, ಎಸ್. ಯೋಗಲಿಂಗಂ, ಕೃಷ್ಣೇಗೌಡ, ತಾವರೆಕೆರೆ ನಾಗರಾಜ್, ಅಪೂರ್ವ ಡಿ. ಸಾಗರ್, ರಘು ಟಿ, ಕೆ. ಲಕ್ಷ್ಮಣ ಸುವರ್ಣ, ಶ್ರೀನಿವಾಸಮೂರ್ತಿ, ಎಚ್.ಜೆ. ಸಿದ್ದರಾಜಯ್ಯ, ಅರ್ಪಿತಾ ಹೆಗ್ಗಡೆ, ರಾಜಣ್ಣ, ಸೂರ್ಯನಾರಾಯಣ ಪಂಜಾಜೆ, ಭಾ.ಮ.ಹರೀಶ್, ಮೈಕೋ ಸೀತಾರಾಮು, ಪಿ.ಟಿ. ಕೃಷ್ಣಮೂರ್ತಿ, ಕೆ.ಪದ್ಮನಾಭನ್.
ನೃತ್ಯ ಕಲಾವಿದರು: ಪೂಜಶ್ರೀ ಎನ್, ರಾಘವೇಂದ್ರ ಜೆ.ಪ್ರಭಾತ್, ಡಾ.ಎ.ವಿ.ಸತ್ಯನಾರಾಯಣ.
ಸಂಗೀತ ಮತ್ತ ಸಾಂಸ್ಕೃತಿಕ ಕ್ಷೇತ್ರ: ಗೋ.ನಾ.ಸ್ವಾಮಿ, ಡಾ.ರೋಹಿಣ್ ಮೋಹನ್, ಬಿ.ಎಸ್.ಸುಕುಮಾರ್, ರುಕ್ಮಿಣಿ ಮಲ್ಲಪ್ಪ ಹರನಾಳ, ಎಂ. ಮುನಿನಾರಾಯಣಪ್ಪ, ಎಸ್.ಎನ್.ರಾಮಪ್ರಸಾದ್, ಅನಂತ ಕುಲಕರ್ಣಿ, ರಾಮಕೃಷ್ಣಪ್ಪ, ಚಿಂತಲಪಲ್ಲಿ ಕೆ.ಸುಬ್ಬಗಂಗಾ, ಪ್ರಸನ್ನ ಮಾಧವಗುಡಿ, ಗಿರಿಜಾ.
ವೈದ್ಯ ಕ್ಷೇತ್ರ: ಡಾ.ಶಿವಲಿಂಗಯ್ಯ, ಡಾ.ಮೃತ್ಯುಂಜಯ, ಡಾ.ಶ್ರೀಕಾಂತಶೆಟ್ಟಿ, ಡಾ.ವೆಂಕಟೇಶ್
ಮಾಧ್ಯಮ ಕ್ಷೇತ್ರ: ರಾಧಾಕೃಷ್ಣ ಭಡ್ತಿ, ಎಲ್.ಪ್ರಕಾಶ್, ವಿಜಯ ಕುಮಾರ್ ಮಲಗಿಹಾಳ, ರವೀಂದ್ರ ಭಟ್ಟ, ಕಂಕಮೂರ್ತಿ, ಕೆ.ಎನ್.ವಿಜಯ್ಕುಮಾರ್ ಸ್ವಾಮಿ, ರಾಮಚಂದ್ರ, ಸೋಮಸುಂದರ ರೆಡ್ಡಿ, ಕೆ.ಎಸ್. ಸೋಮಶೇಖರ್, ಡಿ.ಮಹಾದೇವ, ಸಿ.ಎಸ್.ಭೂಪಯ್ಯ, ವಿ.ನಾಗರಾಜ್, ಜಿ.ಎನ್.ಮೋಹನ್, ತಿರುವನೂರು ಮಂಜುನಾಥ್, ವಿಲಾಸ್ ಮೇಲಗಿರಿ, ರಾಜೇಂದ್ರ ಪಿ, ಚಂದ್ರಶೇಖರ್, ಓಂಕಾರ್ ಉಮೇಶ್, ರವಿಕೀರ್ತಿ, ಡಾ. ಸೂರ್ಯಪ್ರಸಾದ್, ಕೆ.ವಿ.ಪರಮೇಶ್.
ವಿವಿಧ ಕ್ಷೇತ್ರದ ಸಾಧಕರು: ಸುಧಾಕರ್ ಚತುರ್ವೇದಿ, ಅಶ್ವಿನಿ, ಪಾಲನೇತ್ರ, ಬೇಲಿ ಹನುಮಂತರಾವ್ ಶ್ರೀಧರ್, ಬಿ.ಎಸ್. ಸತ್ಯನಾರಾಯಣ, ನಳಿನಿ ಶೇಖರ್, ರಮಾಕಂತ, ವೈ.ಶ್ರೀನಿವಾಸ್, ಡಾ.ಐ.ಎಂ.ಎಸ್.ಮಣಿವಣ್ಣನ್, ಎಸ್.ಮಾದೇಶ್ವರನ್, ಎಚ್.ಎಂ.ಆನಂದಮೂರ್ತಿ, ಎಸ್.ಸೋಮಸುಂದರ್ ದೀಕ್ಷಿತ್, ಎಸ್.ಶಿವಮೂರ್ತಿ, ನಾಗೇಂದ್ರ, ಎಂ.ರಾಜಣ್ಣ, ಕೆ.ಎಸ್.ಶ್ರೀನಿವಾಸ್, ಗಣೇಶ್ ಪ್ರಸಾದ್, ಸಜ್ಜನ್ ಪೂವಯ್ಯ, ಸುಬ್ರಮಣ್ಯ, ಹೆಬ್ಬಾರ್.
ವಿಜ್ಞಾನ ಕ್ಷೇತ್ರ: ಜಿ.ಎಸ್.ಅಶ್ವಿನ್.
ಯೋಗ ಸಾಧಕರು: ಡಿ. ನಾಗರಾಜ್.