ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜನಸಂಖ್ಯೆ ಆಧಾರದಲ್ಲಿ ಅನುದಾನ

Mainashree
Updated On : 27 Jun 2014, 11:15 am

ಬೆಂಗಳೂರು: ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ಹಾಗೂ ಗ್ರಾಮದ ಜನಸಂಖ್ಯೆ ಆಧಾರದಲ್ಲಿ ಸರ್ಕಾರ ಅನುದಾನವನ್ನು ಹಂಚಬೇಕು ಎಂದು ಒತ್ತಾಯಿಸಲು ಬಿಜೆಪಿ ಘಟಕಗಳು ನಡೆಸಿದ ಗ್ರಾಮ ಪಂಚಾಯಿತಿಗಳ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಗಿದೆ. ಬಿಜೆಪಿ ಘಟಕಗಳು ಬೆಳಗಾವಿಯಲ್ಲಿ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮತ್ತು ಗ್ರಾಮ ಪಂಚಾಯಿತಿಗಳ ಮರು ವಿಂಗಡನೆ ಕುರಿತು ಆಯೋಜಿಸಿದ್ದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳ ಅನುದಾನವು ಪಂಚಾಯಿತಿ ಸದಸ್ಯರ ಸಂಖ್ಯೆ ಹಾಗೂ ಗ್ರಾಮದ ಜನಸಂಖ್ಯೆ ಆಧರಿಸಿ ನಿಗದಿಯಾಗಬೇಕು. ಕನಿಷ್ಠ 10 ಸದಸ್ಯರ ಸಂಖ್ಯಾ ಬಲವಿದ್ದರೆ ಕನಿಷ್ಠ 25 ಲಕ್ಷ ಅನುದಾನವಿರಬೇಕು ಎಂದು ನಿರ್ಧರಿಸಲಾಗಿದೆ.
ಪಂಚಾಯಿತಿ ಪದಾಧಿಕಾರಿಗಳ ಅವಧಿ 5 ವರ್ಷ ಹಾಗೂ ಸದಸ್ಯತ್ವದ ಮೀಸಲು ಕನಿಷ್ಠ 2 ಅವಧಿಗಿರಬೇಕು. ಸದಸ್ಯರ ಸಭಾ ಭತ್ಯೆ, ಗೌರವ ಧನವನ್ನು ಸೂಕ್ತ ರೀತಿಯಲ್ಲಿ ಹೆಚ್ಚಿಸಬೇಕು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಗೌರವ ಧನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವೇತನಕ್ಕಿಂತ ಹೆಚ್ಚಿರಬೇಕು. ಸಾಕ್ಷರತೆ ಇಲ್ಲದ ಅಥವಾ ಸ್ವಲ್ಪಮಟ್ಟಿಗೆ ಸಾಕ್ಷರತೆಯಿರುವ ಅಧ್ಯಕ್ಷರು ಕಾರ್ಯನಿರ್ವಹಿಸಲು ವಿದ್ಯಾರ್ಹತೆ ಹೊಂದಿದ ಸಹಾಯಕರೊಬ್ಬರನ್ನು ಹೊಂದಲು ಅನುಕೂಲ ಕಲ್ಪಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಪಂಚಾಯಿತಿ ರಚನೆ: ಬೆಳಗಾವಿ ಜಿಲ್ಲೆಯ ಖಾನಾಪೂರ, ಬೆಳಗಾವಿ, ಕಿತ್ತೂರು, ಬೈಲಹೊಂಗಲ, ಹುಕ್ಕೇರಿ, ಚಿಕ್ಕೋಡಿ ಭಾಗಗಳಲ್ಲಿ 2-3 ಸಾವಿರ ಜನಸಂಖ್ಯೆಗೆ ಒಂದರಂತೆ ನೂತನ ಗ್ರಾಮ ಪಂಚಾಯಿತಿ ರಚಿಸಬೇಕು. ಸವದತ್ತಿ, ರಾಮದುರ್ಗ, ಗೋಕಾಕ, ರಾಯಭಾಗ, ಅಥಣಿ, ಹುಕ್ಕೇರಿ, ಚಿಕ್ಕೋಡಿಗಳಲ್ಲಿ 5 ಸಾವಿರ ಮೇಲ್ಪಟ್ಟ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂ.ಗಳ ವಿಂಗಡಣಾ ಸಮಿತಿ ರಚನೆಗೆ ಬೇಡಿಕೆ ಸಲ್ಲಿಸಲಾಗುವುದು. ಮಲೆನಾಡು ಪ್ರದೇಶಗಳಲ್ಲಿ ಗ್ರಾಮ ಪಂ.ಗಳ ಅಂತರ 3 ಕಿ.ಮೀಗಿಂತ ಕಡಿಮೆ ಇರಬೇಕು ಎಂದು ನಿರ್ಧರಿಸಲಾಗಿದೆ.
10 ಸಾವಿರ ಜನಸಂಖ್ಯೆಗಿಂತ ಮೇಲ್ಪಟ್ಟ ಗ್ರಾಮ ಪಂ.ಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮಾಡಿ, ಪ್ರತಿಶತ ಕೃಷಿಯೇತರ ಕುಟುಂಬ ಮಿತಿಯನ್ನು ಶೇ.50 ರಿಂದ ಶೇ.25 ಕ್ಕೆ ಇಳಿಸಬೇಕೆಂದು ಒತ್ತಾಯಿಸಲು ತೀರ್ಮಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement