ದ್ವಿದಳಧಾನ್ಯಗಳ ಆಮದು ಸುಂಕ ಹೆಚ್ಚಿಸುವಂತೆ ಪ್ರಧಾನಿಗೆ ಪತ್ರ
ತೊಗರಿ ಬೇಳೆ ಸೇರಿದಂತೆ ದ್ವಿದಳ ಧಾನ್ಯಗಳ ಆಮದು ಸುಂಕ...
ಬೆಂಗಳೂರು: ತೊಗರಿ ಬೇಳೆ ಸೇರಿದಂತೆ ದ್ವಿದಳ ಧಾನ್ಯಗಳ ಆಮದು ಸುಂಕ ಹೆಚ್ಚಿಸುವಂತೆ ಪ್ರಧಾನಿಯವರಿಗೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಎಫ್ಕೆಸಿಸಿಐ ಏರ್ಪಡಿಸಿದ್ದ 97ನೇ ಮಹಾಸಭೆಯಲ್ಲಿ ಮಾತನಾಡಿದ ಅವರು, ಆಮದು ಶುಲ್ಕವನ್ನು ಶೇ.30ರಷ್ಟು ಹೆಚ್ಚಿಸಲು ಪತ್ರ ಬರೆಯಲಾಗುವುದು. ದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿ ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು. ಬೇಳೆಕಾಳುಗಳ ಮೇಲಿನ ಆಮದು ಸುಂಕ ಕಡಿಮೆ ಇರುವುದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ. ಸುಂಕ ಹೆಚ್ಚಿಸಿದರೆ ನಮ್ಮ ರೈತರಿಗೆ ಅನುಕೂಲವಾಗಲಿದೆ ಎಂದರು. ನಮ್ಮ ರಾಜ್ಯದಲ್ಲಿ ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳ ಉತ್ಪನ್ನ ಕಡಿಮೆ ಇದ್ದು, ಸರ್ಕಾರ ರು. 132 ಕೋಟಿಯ ಧಾನ್ಯಗಳನ್ನು ಖರೀದಿಸಿದೆ. ಹಾಗಾಗಿ ರೈತರು ಆ ಬೆಳೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.