ಪತ್ರಕರ್ತೆ, ಹೋರಾಟಗಾರ್ತಿ ಉಮಾದೇವಿ ಟೋಪಣ್ಣವರ ನಿಧನ
ಬೆಳಗಾವಿ: ಕನ್ನಡಮ್ಮ ಪತ್ರಿಕೆ ಸಂಪಾದಕಿ ಹಾಗೂ ಕನ್ನಡ ಹೋರಾಟಗಾರ್ತಿ ಉಮಾದೇವಿ ಟೋಪಣ್ಣವರ (70) ಗುರುವಾರ ರಾತ್ರಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಎಲ್‌ಇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರಿಗೆ ಕನ್ನಡ ಹೋರಾಟಗಾರ ರಾಜೀವ ಟೋಪಣ್ಣವರ ಸೇರಿದಂತೆ ಐವರು ಮಕ್ಕಳಿದ್ದಾರೆ.
ಕನ್ನಡಮ್ಮ ಪತ್ರಿಕೆ ಸಂಪಾದಕರಾಗಿದ್ದ ಮಹಾದೇವ ಟೋಪಣ್ಣವರ ನಿಧನದ ಬಳಿಕ ಪತ್ರಿಕೆಯ ಜವಾಬ್ದಾರಿಯನ್ನು ಇವರು ಹೊತ್ತಿದ್ದರು. 2 ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದು, ಕನ್ನಡ ಹೋರಾಟದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಮ್ಮ ಪತ್ರಿಕೆಯ ಮೂಲಕವೂ ಕನ್ನಡ ಪರ ಧ್ವನಿ ಎತ್ತುತ್ತಿದ್ದರು. 2 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಮಾದೇವಿ ಕಳೆದ ಜೂ.11ರಿಂದ ಕೋಮಾದಲ್ಲಿದ್ದರು. ಸದಾಶಿವ ನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.